ಬೆಂಗಳೂರು: ಹೊಸ ವರ್ಷ ಸ್ವಾಗತಿಸಲು ಜನರು ಸಜ್ಜಾಗಿ ನಿಂತಿದ್ದಾರೆ. ಈ ಮಧ್ಯೆ ಸಂಜೆ ವೇಳೆಗೆ ಇಲ್ಲೊಬ್ಬ ವ್ಯಕ್ತಿ ಕಂಠಪೂರ್ತಿ ಕುಡಿದು ರಸ್ತೆಯ ಡಿವೈಡರ್ ಮೇಲೆ ಕಾರು ಹತ್ತಿಸಿ ರಂಪಾಟ ಮಾಡಿರುವ ಘಟನೆ ನಡೆದಿದೆ.
ಇಂದಿರಾನಗರದ 100 ಫೀಟ್ ರಸ್ತೆಯ 12ನೇ ಮೇನ್ ಜಂಕ್ಷನ್ ನಲ್ಲಿ ಈ ಘಟನೆ ನಡೆದಿದೆ. ಕುಡಿದ ಅಮಲಿನಲ್ಲಿ ಡಿವೈಡರ್ ಹತ್ತಿಸಿ ಸಂಚಾರಕ್ಕೆ ಅಡ್ಡಿ ಮಾಡಿದ್ದಲ್ಲದೇ ಅಪಘಾತ ನಡೆದ ಸ್ಥಳದ ಸುತ್ತಲೂ ಸುತ್ತುವರಿದ ಸಾರ್ವಜನಿಕರೊಂದಿಗೆ ಕಿರಿಕ್ ಮಾಡಿದ್ದಾನೆ.
ನಂತರ ಟ್ರಾಫಿಕ್ ಆಗುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಕೆಳಗಿಳಿಸುವಂತೆ ಸೂಚನೆ ನೀಡಿದ್ದಾರೆ. ಆಗ ಕಾರಿನೊಳಗಿದ್ದ ವ್ಯಕ್ತಿ ಮದ್ಯಪಾನ ಮಾಡಿ ಕಾರು ಚಲಾಯಿಸಿ ಅವಘಡ ಮಾಡಿಕೊಂಡಿದ್ದಲ್ಲದೇ ಪೊಲೀಸ್ ಹಾಗೂ ಸಾರ್ವಜನಿಕರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.