ಅಯೋಧ್ಯೆ: ಕಳೆದ 5 ವರ್ಷಗಳಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ (Shri Ram Janmabhoomi Teerth Kshetra Trust) ಬರೋಬ್ಬರಿ 400 ಕೋಟಿ ರೂ. ತೆರಿಗೆ(Tax) ಕಟ್ಟಿದೆ ಎನ್ನಲಾಗಿದೆ.
ಈ ಕುರಿತು ಟ್ರಸ್ಟ್ ನ ಕಾರ್ಯದರ್ಶಿ ಚಂಪತ್ ರೈ ಮಾಹಿತಿ ನೀಡಿದ್ದಾರೆ. 2020ರ ಫೆ.5ರಿಂದ 2025 ಫೆ.5ರ ವರೆಗೆ ಈ ಮೊತ್ತದ ತೆರಿಗೆಯನ್ನು ಪಾವತಿಸಲಾಗಿದೆ. ಇದರಲ್ಲಿ 270 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿಸಲಾಗಿದೆ. ಉಳಿದ 130 ಕೋಟಿ ರೂ. ವಿವಿಧ ತೆರಿಗೆ ವರ್ಗಗಳ ರೂಪದಲ್ಲಿ ಕಟ್ಟಲಾಗಿದೆ. ವರ್ಷದಿಂದ ವರ್ಷಕ್ಕೆ ಅಯೋಧ್ಯೆ(Ayodhya)ಗೆ ಬರುವ ಭಕ್ತರ ಸಂಖ್ಯೆ 10 ಪಟ್ಟು ಹೆಚ್ಚಳವಾಗುತ್ತಿದೆ. ಉದ್ಯೋಗಾವಕಾಶಗಳು ಕೂಡ ಸೃಷ್ಟಿಯಾಗಿವೆ ಎಂದಿದ್ದಾರೆ.
ಮಹಾಕುಂಭದ ಸಮಯದಲ್ಲಿ 1.26 ಕೋಟಿ ಭಕ್ತರು ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಹಿಂದಿನ ವರ್ಷ ಅಯೋಧ್ಯೆಗೆ 16 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದರು ಎಂದು ಮಾಹಿತಿ ನೀಡಿದ್ದಾರೆ.