ಇತ್ತೀಚೆಗೆ ನಮ್ರತಾಗೌಡ ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು. ನಮ್ಮು ಫ್ಯಾನ್ಸ್ ಶುಭಾಶಯಗಳು ಮಹಾಪೂರವನ್ನೇ ಹರಿಸಿದ್ದರು. ಇನ್ನು ನಮೃತಗೌಡ ಹುಟ್ಟು ಹಬ್ಬಕ್ಕೆ ರಕ್ಷಕ್ ಬುಲೆಟ್ ಬಿಗ್ ಸರ್ಪ್ರೈಸ್ ಒಂದನ್ನು ಕೊಟ್ಟಿದ್ದಾರೆ.
ಬಿಗ್ ಬಾಸ್ ಖ್ಯಾತಿಯ ನಮೃತ ನಮೃತ ಗೌಡ ಹುಟ್ಟುಹಬ್ಬಕ್ಕೆ ರಕ್ಷಕ್ ಬುಲೆಟ್ ಕೇಕ್ ಕಟ್ ಮಾಡಿಸಿ ಶುಭಾಶಯವನ್ನು ತಿಳಿಸಿದ್ದಾರೆ. ನಮ್ರತಾಳನ್ನು ಸರ್ಪ್ರೈಸ್ ಆಗಿ ಕರೆದುಕೊಂಡು ಬಂದು ಎಲ್ಲರೆದುರು ಬರ್ತ್ ಡೇ ಆಚರಿಸಿದ್ದಾರೆ.
ಇನ್ನು ರಕ್ಷಕ ಬುಲೆಟ್ ಈ ರೀತಿಯಾಗಿ ವಿಶ್ ಮಾಡಿರುವುದಕ್ಕೆ ನಮ್ರತ ಗೌಡ ಆನಂದ ಭಾಷ್ಪವನ್ನು ಸುರಿಸಿದ್ದಾರೆ. ರಕ್ಷಕ್ ನಮ್ರತಾಗೆ ಅಕ್ಕ ಅಂತ ಕರೆದರೆ, ನಮ್ರತಾ ತಮ್ಮ ಎಂದು ರಕ್ಷಕ್‌ನ ಕರೆಯುತ್ತಾರೆ. ʻಬಿಗ್ ಬಾಸ್ʼನಿಂದ ಹೊರ ಬಂದ ನಂತರವೂ ಇವರಿಬ್ಬರ ಅಕ್ಕ – ತಮ್ಮ ಬಾಂಧವ್ಯ ಮುಂದುವರೆದಿದೆ. ಸದ್ಯ ರಕ್ಷಕ್ ತನ್ನ ನೆಚ್ಚಿನ ಅಕ್ಕ ನಮ್ರತಾ ಗೌಡ ಅವರ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಿ ನಮ್ರತಾಗೆ ಸರ್ಪ್ರೈಸ್ ನೀಡಿದ್ದಾರೆ.
ವೀಡಿಯೋ ವೈರಲ್!
ನಮ್ರತಾ ಅವರ ಹುಟ್ಟು ಹಬ್ಬವನ್ನು ಆಚರಿಸಿರುವ ವಿಡಿಯೋವನ್ನು ರಕ್ಷಕ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ. ಈ ವಿಡಿಯೋಗೆ, “ಹುಟ್ಟುಹಬ್ಬದ ಶುಭಾಶಯಗಳು ಪಾಪು ನಿಮ್ಮೊಂದಿಗೆ ಎಂದೆಂದಿಗೂ” ಎಂಬ ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ. ಈ ವಿಡಿಯೋಗೆ, “ಅಕ್ಕ – ತಮ್ಮ ಅಂದ್ರೆ ಹೀಗಿರಬೇಕು” ಎಂದೆಲ್ಲಾ ನೆಟ್ಟಿಗರು ಕಾಮೆಂಟ್‌ಗಳನ್ನು ಮಾಡಿದ್ದಾರೆ. ರಕ್ಷಕ್ ಎಲಿಮಿನೇಟ್ ಆದಾಗಲೂ ನಮ್ರತಾ ಸಖತ್ ಎಮೋಷನಲ್ ಆಗಿದ್ದರು. ಇನ್ನೂ ರಕ್ಷಕ್ ಕೂಡ ಹೊರ ಬಂದ ಬಳಿಕ, “ನಮ್ರತಾರನ್ನು ಮಿಸ್ ಮಾಡಿಕೊಳ್ಳುತ್ತೀನಿ” ಎಂದು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.