ನವದೆಹಲಿ: ಚೀನಾದ ರಕ್ಷಣಾ ಸಚಿವ ಡೋಂಗ್ ಜುನ್ ಅವರನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ಮಾಡಿದ್ದಾರೆ.
ಈ ವೇಳೆ “ಪರಸ್ಪರ ನಂಬಿಕೆಯನ್ನು ಪುನರ್ನಿರ್ಮಿಸಲು ಮಾರ್ಗಸೂಚಿಯತ್ತ ಕೆಲಸ ಮಾಡುವುದಾಗಿ ಪ್ರತಿಜ್ಞೆ ಮಾಡಿವೆ. “ಭಾರತ-ಚೀನಾ ಗಡಿಯಲ್ಲಿ ಗಾಲ್ವಾನ್ ಮಾದರಿಯ ಘರ್ಷಣೆಯ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಪೂರ್ವ ಲಡಾಖ್‌ನ ಡೆಮ್‌ಚೋಕ್ ಮತ್ತು ಡೆಪ್ಸಾಂಗ್‌ನ ಉಳಿದ ಎರಡು ಮುಖಾಮುಖಿ ಪಾಯಿಂಟ್‌ಗಳಿಂದ ಭಾರತೀಯ ಮತ್ತು ಚೀನಾ ಸೇನೆಗಳನ್ನು ಹಿಂಪಡೆದ ಕೆಲವೇ ವಾರಗಳ ನಂತರ ಲಾವೋಸ್ ನ ರಾಜಧಾನಿ ವಿಯೆಂಟಿಯಾನ್ ನಲ್ಲಿ ಉಭಯ ದೇಶಗಳ ನಾಯಕರು ಭೇಟಿಯಾಗಿ ಮಾತನಾಡಿದ್ದಾರೆ.
ರಷ್ಯಾದ ಕಜಾನ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಇತ್ತೀಚಿನ ಒಪ್ಪಂದಗಳು ಮತ್ತು ಸಭೆಯ ನಂತರ ಇಬ್ಬರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಮೊದಲ ಸಭೆ ಇದಾಗಿದೆ.