ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಪ್ರಕರಣದಲ್ಲಿ ಜೈಲು ಸೇರಿ ಇತ್ತೀಚೆಗೆ ಬಿಡುಗಡೆಯಾದ ರಾಜೀವ್ ಗೌಡ, ಪಾಪ ಪರಿಹಾರಕ್ಕಾಗಿ ವಿಶೇಷ ಪೂಜೆ ಮತ್ತು ಔತಣಕೂಟ ಆಯೋಜಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಗ್ರಾಮದಲ್ಲಿ ನಡೆದಿದೆ.
ಸಾದಲಿ ಗ್ರಾಮದ ಸಾದಲಮ್ಮ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ರಾಜೀವ್ ಗೌಡ ಹಾಗೂ ಸಹನ ರಾಜೀವ್ ಗೌಡ ದಂಪತಿ ದೇವಿಯ ಆಶೀರ್ವಾದ ಪಡೆದು ಬಳಿಕ ಬೆಂಬಲಿಗರಿಗೆ ಭರ್ಜರಿ ಬಾಡೂಟ ವ್ಯವಸ್ಥೆ ಮಾಡಿದ್ದಾರೆ. ಪೂಜೆ ನೆಪದಲ್ಲಿ ಆಯೋಜಿಸಿದ ಈ ಕಾರ್ಯಕ್ರಮಕ್ಕೆ ಸಾವಿರಾರು ಜನರು ಹರಿದು ಬಂದಿದ್ದಾರೆ.
ಸುಮಾರು ಐದು ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, ಮುದ್ದೆ, ನಾಟಿಕೋಳಿ, ಕುರಿಮಾಂಸ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಸವಿಯಲು ಜನರು ಮುಗಿಬಿದ್ದಿದ್ದರು. ಭಾರಿ ಸಂಖ್ಯೆಯಲ್ಲಿ ಜನರು ಭಾಗವಹಿಸಿದ ಹಿನ್ನೆಲೆ, ಬೃಹತ್ ಪೆಂಡಾಲ್ ಹಾಕಿ ಕಾರ್ಯಕ್ರಮವನ್ನು ಸುಸಜ್ಜಿತವಾಗಿ ಆಯೋಜಿಸಲಾಗಿತ್ತು. ಗ್ರಾಮದಲ್ಲಿ ಈ ಕಾರ್ಯಕ್ರಮ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ : ವೈದ್ಯಧಿಕಾರಿಯನ್ನೇ ಅಬಕಾರಿ ಇಲಾಖೆಗೆ ವರ್ಗಾವಣೆ ಮಾಡಿದ್ರಾ ಸಿಎಂ ಸಿದ್ದು? ಸುನಿಲ್ ಕುಮಾರ್ ಬಾಂಬ್



















