ಬೆಂಗಳೂರು : ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಬಣ ಜಾಣ ಮೌನವಹಿಸಿದೆ.
ಕೆ.ಎನ್ ರಾಜಣ್ಣ ಸಿಎಂ ಸಿದ್ದರಾಮಯ್ಯ ಬಣದ ಪ್ರಮುಖ ನಾಯಕರಾಗಿದ್ದು, ರಾಜಣ್ಣ ಆಪ್ತರು ಆಂತರ್ಯದಲ್ಲಿ ಬೇಸತ್ತಿದ್ದು, ಕಾಂಗ್ರೇಸ್ ಮನೆ ಈಗ ಗೊಂದಲದ ಗೂಡಾಗಿದೆ. ರಾಜಣ್ಣ ಸಂಪುಟದಿಂದ ವಜಾಗೊಳಿಸಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಬಣ ಈಗ ಜಾಣ ಮೌನವಹಿಸಿದೆ. ಒಂದ ಹಂತಕ್ಕೆ ಗಮನಿಸಿದೆ ಸಿಎಂ ಸಿದ್ದರಾಮಯ್ಯ ಹಾಗೂ ರಾಜಣ್ಣ ಆಪ್ತ ಬಳಗ ಬೂದಿ ಮುಚ್ಚಿದ ಕೆಂಡದಂತಾಗಿದ್ದಾರೆ.
ಹೈಕಮಾಂಡ್ ಕ್ರಮದ ಬಗ್ಗೆ ಸಚಿವರು, ರಾಜಣ್ಣ ಪರ ಹೇಳಿಕೆ ನೀಡುಲು ಹಿಂದೇಟು ಹಾಕುತ್ತಿದ್ದಾರೆ. ರಾಜಣ್ಣ ಅವರ ಸ್ವ ಕ್ಷೇತ್ರ ಮದುಗಿರಿಯಲ್ಲಿ ನಿನ್ನೆ(ಮಂಗಳವಾರ) ರಾಜಣ್ಣ ಬೆಂಬಲಿಗರಿಂದ ಬಂದ್ ಮಾಡಿರುವುದು ವಿರೋಧ ಪಕ್ಷಗಳಿಗೆ ಪ್ರಮುಖ ಅಸ್ತ್ರವಾಗಿದ್ದು, ರಾಜಣ್ಣ ವಜಾ ವಿಚಾರವನ್ನು ಸದನದ ಮುಂದೆ ಇಟ್ಟುಕೊಂಡು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.



















