ಬೆಂಗಳೂರು: ಆಪರೇಷನ್ ಸಿಂಧೂರದಿಂದಾಗಿ ಸ್ಥಗಿತಗೊಂಡಿದ್ದ ಐಪಿಎಲ್ ಇಂದಿನಿಂದ ಆರಂಭವಾಗಿದೆ. ಆದರೆ, ಮೊದಲ ಪಂದ್ಯಕ್ಕೆ ಮಳೆರಾಯನ ವಿಘ್ನ ಶುರುವಾಗಿದೆ.
ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆಂಗಳೂರು ತಂಡ ಹಾಗೂ ಕೆಕೆಆರ್ ಮಧ್ಯೆ ಫೈಟ್ ನಡೆಯಲಿದೆ. ಅಲ್ಲದೇ, ವಿರಾಟ್ ಕೊಹ್ಲಿ ಟೆಸ್ಟ್ ಗೆ ವಿದಾಯ ಹೇಳಿದ ನಂತರ ಮೊದಲ ಬಾರಿ ಕ್ರೀಡಾಂಗಣಕ್ಕೆ ಇಳಿಯುತ್ತಿದ್ದು, ಅಭಿಮಾನಿಗಳು ಈ ದಿನವನ್ನು ವಿಶೇಷವಾಗಿ ಆಚರಿಸಲು ಮುಂದಾಗಿದ್ದಾರೆ.
ಆದರೆ, ಅಭಿಮಾನಿಗಳ ಈ ಕನಸಿಗೆ ಮಳೆರಾಯ ತಣ್ಣಿರು ಎಸೆದಿದ್ದಾನೆ. ಈಗಾಗಲೇ ಬೆಂಗಳೂರಿನಲ್ಲಿ ಭಾರೀ ಮಳೆ ಆರಂಭವಾಗಿದ್ದು, ಕಪ್ಪು ಮೋಡದೊಂದಿಗೆ ಭರ್ಜರಿ ಮಳೆ ಸುರಿಯುತ್ತಿದೆ. ಇಂದು 7.30ಕ್ಕೆ ಮಳೆ ಆರಂಭವಾಗಬೇಕಿದ್ದು, ಮಳೆ ಮಾತ್ರ ವ್ಯಾಪಕವಾಗಿ ಸುರಿಯುತ್ತಿದೆ. ಇಂದಿನ ಪಂದ್ಯವನ್ನು ಮಳೆರಾಯ ಸಂಪೂರ್ಣವಾಗಿ ಆಹುತಿ ಮಾಡುತ್ತಾನಾ ಎಂದು ಅಭಿಮಾನಿಗಳು ಬೇಸರಿಸಿಕೊಳ್ಳುತ್ತಿದ್ದಾರೆ.