ಬೆಂಗಳೂರು : ದೇಶದ ಪ್ರತಿ ದಿನ ಲಕ್ಷಾಂತರ ಜನ ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ಕಡಿಮೆ ಟಿಕೆಟ್ ಬೆಲೆ, ಸ್ಲೀಪರ್ ಸೇರಿ ಹಲವು ಕೋಚ್ ಗಳಲ್ಲಿ ಆರಾಮದಾಯಕವಾಗಿ ಪ್ರಯಾಣಿಸಲು ರೈಲುಗಳು ಸಹಕಾರಿಯಾಗಿವೆ. ಇದೀಗ ಕೋಟ್ಯಂತರ ಜನ ರೈಲುಗಳಲ್ಲಿ ಪ್ರಯಾಣಿಸುವ ಕಾರಣ ರೈಲ್ವೆ ಇಲಾಖೆಯು ಮಹತ್ವದ ಬದಲಾವಣೆ ಜಾರಿಗೆ ತರಲು ಮುಂದಾಗಿದೆ. ಇದರಿಂದ ರೈಲು ಪ್ರಯಾಣಿಕರು ಕೊನೆಯ ಕ್ಷಣದಲ್ಲೂ ಬೋರ್ಡಿಂಗ್ ಪಾಯಿಂಟ್ (ರೈಲು ಹತ್ತುವ ನಿಲ್ದಾಣ) ಬದಲಾಯಿಸಲು ಸಾಧ್ಯವಾಗಲಿದೆ.
ಹೌದು, ರೈಲು ಹೊರಡುವ 15-30 ನಿಮಿಷದೊಳಗೆ ಕೂಡ ಪ್ರಯಾಣಿಕರು ಬೋರ್ಡಿಂಗ್ ಪಾಯಿಂಟ್ ಬದಲಾವಣೆ ಮಾಡಿಕೊಳ್ಳುವ ಸೌಲಭ್ಯ ನೀಡಲು ರೈಲ್ವೆ ಇಲಾಖೆಯು ಚಿಂತನೆ ನಡೆಸಿದೆ. ಒಂದು ಬೋರ್ಡಿಂಗ್ ಪಾಯಿಂಟ್ ಆಯ್ಕೆ ಮಾಡಿಕೊಂಡು, ಇನ್ನೊಂದು ನಿಲ್ದಾಣದಿಂದ ರೈಲು ಹತ್ತಲು ಅವಕಾಶವಿಲ್ಲ.
ಇದಕ್ಕೂ ಮೊದಲು ಚಾರ್ಟ್ ಪ್ರಿಪೇರ್ ಆಗುವ ಮೊದಲು ಅಥವಾ 24 ಗಂಟೆ ಮೊದಲು ಬೋರ್ಡಿಂಗ್ ಪಾಯಿಂಟ್ ಬದಲಾವಣೆ ಮಾಡಿಕೊಳ್ಳಲು ಮಾತ್ರ ಅವಕಾಶ ನೀಡಲಾಗಿತ್ತು. ಈಗ ಪ್ರಯಾಣಿಕರ ಹಿತದೃಷ್ಟಿಯಿಂದ ರೈಲು ಹೊರಡುವ ಕೊನೆಯ ಕ್ಷಣದಲ್ಲೂ ಆನ್ ಲೈನ್ ಮೂಲಕವೇ ಬೋರ್ಡಿಂಗ್ ಪಾಯಿಂಟ್ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಉದಾಹರಣೆಗೆ, ನೀವು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಪ್ರಯಾಣ ಆರಂಭಿಸುವ ಬದಲು, ಯಶವಂತಪುರ ರೈಲು ನಿಲ್ದಾಣದಿಂದ ರೈಲು ಹತ್ತಬಹುದಾಗಿದೆ. ಇದಕ್ಕಾಗಿ ಆನ್ ಲೈನ್ ಮೂಲಕ ಬೋರ್ಡಿಂಗ್ ಪಾಯಿಂಟ್ ಬದಲಾವಣೆ ಮಾಡಿಕೊಳ್ಳಬೇಕು.
ಆನ್ ಲೈನ್ ನಲ್ಲಿ ಬದಲಾವಣೆ ಹೇಗೆ?
• IRCTC ವೆಬ್ ಸೈಟ್/ಆ್ಯಪ್ ಗೆ ಲಾಗಿನ್ ಆಗಿ. ನಿಮ್ಮ ಬಳಕೆದಾರ ಹೆಸರು (Username) ಮತ್ತು ಪಾಸ್ ವರ್ಡ್ ನಮೂದಿಸುವ ಮೂಲಕ ಲಾಗಿನ್ ಆಗಿ.
• ‘My Transactions’ ಗೆ ಹೋಗಿ: ‘My Account’ ವಿಭಾಗದಲ್ಲಿ ‘Booked Ticket History’ ಮೇಲೆ ಕ್ಲಿಕ್ ಮಾಡಿ.
• ನೀವು ಯಾವ ಟಿಕೆಟ್ನ ಬೋರ್ಡಿಂಗ್ ಪಾಯಿಂಟ್ ಬದಲಾಯಿಸಬೇಕೋ ಆ ಟಿಕೆಟ್ ಮೇಲೆ ಕ್ಲಿಕ್ ಮಾಡಿ.
• ಮೆನುವಿನಲ್ಲಿ ‘Change Boarding Point’ ಅನ್ನು ಆಯ್ಕೆ ಮಾಡಿಕೊಲ್ಳಿ.
• ಸ್ಕ್ರೀನ್ ಮೇಲೆ ಬರುವ ನಿಲ್ದಾಣಗಳ ಪಟ್ಟಿಯಿಂದ ನೀವು ಹತ್ತಲಿರುವ ಹೊಸ ನಿಲ್ದಾಣವನ್ನು ಆಯ್ಕೆ ಮಾಡಿ ‘Submit’ ಅಥವಾ ‘OK’ ನೀಡಿ.
• ಬದಲಾವಣೆ ಯಶಸ್ವಿಯಾದ ನಂತರ ನಿಮ್ಮ ಮೊಬೈಲ್ಗೆ ದೃಢೀಕರಣ ಸಂದೇಶ (SMS) ಬರುತ್ತದೆ. ಅದನ್ನು ನಮೂದಿಸಿ ಬೋರ್ಡಿಂಗ್ ಪಾಯಿಂಟ್ ಬದಲಾವಣೆ ಮಾಡಿಕೊಳ್ಳಬಹುದು.
ಇದನ್ನೂ ಓದಿ : ವಂಚಿಸಿದ ಪ್ರಿಯತಮನ ವಿರುದ್ಧ ಯುವತಿಯ ಪ್ರತೀಕಾರ | ಪ್ರಜ್ಞೆ ತಪ್ಪಿಸಿ ಗುಪ್ತಾಂಗವನ್ನೇ ಕತ್ತರಿಸಿದ ಪ್ರೇಯಸಿ!



















