ಶಿವಮೊಗ್ಗ: ಮತ ಕಳ್ಳತನವಾಗಿದೆ ಎಂದು ಆರೋಪಿಸಿ ರಾಹುಲ್ ಗಾಂಧಿ ಪ್ರತಿಭಟನೆಗೆ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದ್ದಾರೆ.
ಈ ಕುರಿತು ಶಿವಮೊಗ್ಗದಲ್ಲಿ ಮಾತನಾಡಿದ ಜ್ಞಾನೇಂದ್ರ, ಮತ ಕಳ್ಳತನ ಕಾಂಗ್ರೆಸ್ಸಿಗೆ ಹೊಸದೇನಲ್ಲ, ಹಿಂದಿನಿಂದಲೂ ಗೊತ್ತಿದೆ. ಈ ಹಿಂದೆ ಇಂದಿರಾ ಗಾಂಧಿಯವರು ರಾಜ ನಾರಾಯಣ ವಿರುದ್ಧ ಚಿಕಮಗಳೂರಲ್ಲಿ ಗೆದ್ದಿದ್ದು ಮತಗಟ್ಟೆತನದಿಂದಲೇ, ಹೈಕೋರ್ಟ್ ಇಂದಿರಾ ಗಾಂಧಿ ಅವರ ಚುನಾವಣೆ ಆಯ್ಕೆಯನ್ನು ರದ್ದುಗೊಳಿಸಿತ್ತು. ಸುಪ್ರೀಂ ಕೋರ್ಟ್ ಗೆ ಹೋದರು, ಸುಪ್ರೀಂ ಕೋರ್ಟ್ ಸಹ ಹೈಕೋರ್ಟ್ ನ ನ್ಯಾಯವನ್ನು ಎತ್ತಿ ಹಿಡಿದಿತ್ತು. ಇದನ್ನು ರಾಹುಲ್ ಅರ್ಥ ಮಾಡಿಕೊಳ್ಳಬೇಕೆಂದಿದ್ದಾರೆ.
ಮತ ಕಳ್ಳತನ ಕಾಂಗ್ರೆಸ್ಸಿಗೆ ಇರುವ ಇತಿಹಾಸ. ಈ ಘಟನೆ ನಡೆದು 50 ವರ್ಷ ಆಗಿದೆ. ಈ ಘಟನೆಯನ್ನು ಸಾರ್ವಜನಿಕರು ಮರೆತಿದ್ದಾರೆ. ಪ್ರಜಾಪ್ರಭುತ್ವದ ಕತ್ತನ್ನ ಕತ್ತರಿಸಿದ್ದು ಕಾಂಗ್ರೆಸ್, ಕಾಂಗ್ರೇಸ್ ನ ಬಿಎಲ್‌ಎ ಗಳಿದ್ದಾಗ ಏನು ಮಾಡಿದ್ದರು? ಚುನಾವಣೆ ನಡೆದು ಮೂರು ತಿಂಗಳ ನಂತರ ಆಕ್ಷಪಣೆಗೆ ಅವಕಾಶವಿದೆ. ಈಗಲೂ ಆಯೋಗ ನ್ಯಾಯಾಲಯಕ್ಕೆ ಅಫಿಡೆವಿಟ್ ಹಾಕಿಕೊಳ್ಳಿ ಎಂದಿದ್ದಾರೆ.
ಜನರ ಕಿವಿಗೆ ಹೂ ಇಡುವ ರೀತಿಯಲ್ಲಿ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ. ಮಹಾದೇವಪುರದಲ್ಲಿ ಮತ ಕಳ್ಳತನ ನಡೆದಿದೆ ಎಂದರೆ ಯಾರ ಸರ್ಕಾರವಿತ್ತು. ಮತದಾರ ಪಟ್ಟಿ ಮಾಡುವಾಗ ಇವರ ಸರ್ಕಾರನೆ ಇತ್ತು. ಸಿದ್ದರಾಮಯ್ಯ ಸರ್ಕಾರದ ವಿರುದ್ಧವೇ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ. ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.