2025ರ ಐಪಿಎಲ್ ಮೆಗಾ ಹರಾಜಿನಲ್ಲಿ (IPL Mega Auction) ಭಾರತದ ಸ್ಟಾರ್ ಆಟಗಾರ ಕೆ.ಎಲ್. ರಾಹುಲ್ (KL Rahul) 14 ಕೋಟಿ ರೂ.ಗಳಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದಾರೆ.
ಇದು ಆರ್ ಸಿಬಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ರಾಹುಲ್ ಅವರನ್ನು ಹೊರದಬ್ಬಿದ ಲಕ್ನೋ (LSG) 27 ಕೋಟಿ ರೂ. ದಾಖಲೆ ಬೆಲೆ ರಿಷಬ್ ಪಂತ್ (Rishabh Pant) ಅವರನ್ನು ಆರ್ಟಿಎಂ ಕಾರ್ಡ್ ಅಡಿ ಖರೀದಿಸಿದೆ.
2025ರ ಮೆಗಾ ಹರಾಜಿನಲ್ಲಿ ಈ ಬಾರಿ ರಾಹುಲ್, ಆರ್ಸಿಬಿ ತಂಡದ ಪಾಲಾಗುತ್ತಾರೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿತ್ತು. ಆದರೆ, ಹರಾಜಿನಲ್ಲಿ 8.75 ಕೋಟಿ ರೂ.ಗಳಿಗೆ ಇಂಗ್ಲೆಂಡ್ನ ಲಿಯಾಮ್ ಲಿವಿಂಗ್ಸ್ಟೋನ್ ಖರೀದಿಸಿದ ಆರ್ಸಿಬಿ, ರಾಹುಲ್ ಅವರಿಗಾಗಿ ಬಿಡ್ ಮಾಡಲು ಮುಂದೆ ಬರಲಿಲ್ಲ.
2013ರಿಂದ ಐಪಿಎಲ್ ವೃತ್ತಿ ಬದುಕು ಆರಂಭಿಸಿದ ಕೆ.ಎಲ್ ರಾಹುಲ್ ಮೊದಲು ಸೇರಿದ್ದು ಆರ್ಸಿಬಿ ತಂಡದಲ್ಲಿದ್ದರು. 2014 ಮತ್ತು 2015ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಿದ್ದರು. ಪುನಃ 2016ರಲ್ಲಿ ಆರ್ಸಿಬಿ ತಂಡವನ್ನೇ ಸೇರಿಕೊಂಡಿದ್ದರು. ಆದರೆ, 2017ರಲ್ಲಿ ಗಾಯದ ಸಮಸ್ಯೆಯಿಂದ ಹೊರಗುಳಿದ್ದರು. 2018 ರಿಂದ 2021ರ ವರೆಗೆ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದ ಕೆ.ಎಲ್ ರಾಹುಲ್ 2022ರಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೇರಿಕೊಂಡಿದ್ದರು. ಈಗ ಅವರು ದೆಹಲಿ ಪಾಲಾಗಿದ್ದಾರೆ.