ನಟಿ ರಾಧಿಕಾ ಪಂಡಿತ್ ಈಗ ಸಿನಿಮಾ ಕ್ಷೇತ್ರದಿಂದ ದೂರ ಉಳಿದಿದ್ದಾರೆ. ಸಾಕಷ್ಟು ಹಿತ ಸಿನಿಮಾಗಳನ್ನು ನೀಡಿ ಬಳಿಕ ತನ್ನ ಮದುವೆಯ ನಂತರ ಸಿನಿಮಾಗಳಿಂದ ಕೊಂಚ ದೂರ ಇದ್ದಾರೆ. ರಾಧಿಕಾ ಪಂಡಿತ್ ತಾಯಿಯಾದ ನಂತರ ತನ್ನ ಫ್ಯಾಮಿಲಿ ಜೊತೆಗೆ ಹೆಚ್ಚಾಗಿ ಟೈಮ್ ಸ್ಪೆಂಡ್ ಮಾಡುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫ್ಯಾಮಿಲಿ ಫೋಟೋಗಳನ್ನು ಶೇರ್ ಮಾಡಿಕೊಂಡು ಫ್ಯಾನ್ಸ್ ಗೆ ಖುಷಿ ನೀಡುತ್ತಲೇ ಇರುತ್ತಾರೆ. ಅಭಿಮಾನಿಗಳು ನೀವು ಯಾವಾಗ ಸಿನಿಮಾ ಮಾಡುತ್ತೀರಿ? ಎಂದು ಕಮೆಂಟ್ ಮಾಡುತ್ತಿದ್ದಾರೆ. ನಿಮ್ಮನ್ನು ಸ್ಕ್ರೀನ್ ಮೇಲೆ ಮತ್ತೊಮ್ಮೆ ನೋಡಬೇಕು ಅಂತ ರಾಧಿಕಾ ಪಂಡಿತ್ ಫ್ಯಾನ್ಸ್ ಕಮೆಂಟ್ ಮಾಡುತ್ತಿರುತ್ತಾರೆ.

ಏ. 14ರಂದು ‘ಕೆಜಿಎಫ್ 2’ ಚಿತ್ರವು ರಿಲೀಸ್ ಆಗಿ 3 ವರ್ಷಗಳು ತುಂಬಿವೆ. ಬಾಕ್ಸ್ ಆಫೀಸ್ನಲ್ಲಿ ತನ್ನದೇ ಚಾಪು ಮೂಡಿಸಿದ ಈ ಚಿತ್ರಕ್ಕೆ ಈಗ ಮೂರು ವರ್ಷಗಳ ಸಂಭ್ರಮ. ಈ ಕಾರಣಕ್ಕೆ ಸಿನಿಮಾನ ನೆನಪು ಮಾಡಿಕೊಳ್ಳಲು ರಾಧಿಕಾ ಪಂಡಿತ್ ಅವರು ‘ರಾಕಿಭಾಯ್’ ಜೊತೆ ಇರೋ ಫೋಟೋ ಪೋಸ್ಟ್ ಮಾಡಿದ್ದಾರೆ. ಟೇಕ್ ತೆಗೆದುಕೊಳ್ಳುವಾಗ ಮಧ್ಯದ ಸಮಯ ಎಂಬರ್ಥದಲ್ಲಿ ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ. ಯಶ್ ಅವರು ‘ಕೆಜಿಎಫ್ 2’ ಲುಕ್ನ ಬದಲಿಸಿದ್ದಾರೆ. ಆದರೆ, ರಾಧಿಕಾ ಪಂಡಿತ್ ಹಂಚಿಕೊಂಡಿರುವ ಫೋಟೋದಲ್ಲಿ ನೀವು ಕೆಜಿಎಫ್ ಲುಕ್ನ ಕಾಣಬಹುದಾಗಿದೆ. ರಾಧಿಕಾ ಪಂಡಿತ್ ಅವರು ಟಿ-ಶರ್ಟ್ ಹಾಗೂ ಜೀನ್ಸ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಶಾಂತ್ ನೀಲ್ ಅವರು ‘ಕೆಜಿಎಫ್ 2’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಯಶ್, ಸಂಜಯ್ ದತ್, ಪ್ರಕಾಶ್ ರಾಜ್, ಶ್ರೀನಿಧಿ ಶೆಟ್ಟಿ ಮೊದಲಾದವರು ನಟಿಸಿದ್ದಾರೆ.