ಮಂಗಳೂರು : ನಡುರಸ್ತೆಯಲ್ಲಿ ಬಿಟ್ಟು ಹೋಗಲಾದ ಗೋವುಗಳನ್ನು ಅಕ್ರಮವಾಗಿ ಬೇರೆಡೆಗೆ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಪೋಲಿಸರ ಕೈಗೆ ಸಿಕ್ಕಿ ಬಂಧಿತರಾಗಿದ್ದಾರೆ.
ಪಾಣಾಜೆ ನಿವಾಸಿ ಪ್ರೇಮ್ರಾಜ್ ಅವರ ದೂರು ನೀಡಿದ್ದಾರೆ. ಯಾರೋ ಕಳ್ಳರು ಗೋವುಗಳನ್ನು ಅಕ್ರಮವಾಗಿ ವಾಹನದಲ್ಲಿ ಸಾಗಿಸುತ್ತಿರುವ ವೇಳೆ, ವಾಹನ ದುರಸ್ತಿಗೀಡಾಗಿ ಪುತ್ತೂರು ನರಿಮೊಗರು ಪ್ರದೇಶದಲ್ಲಿ ನಡುರಸ್ತೆಯಲ್ಲೇ ಗೋವುಗಳನ್ನು ಬಿಟ್ಟು ಪರಾರಿಯಾದಿದ್ದಾರೆ. ಸ್ಥಳೀಯರ ಸಹಕಾರದಿಂದ ಪಿರ್ಯಾದುದಾರ ಪ್ರೇಮ್ರಾಜ್ ಅವರು ಗೋವುಗಳನ್ನು ಪುತ್ತೂರು ನಗರ ಠಾಣೆಗೆ ಹಸ್ತಾಂತರಿಸಿದ್ದಾರೆ. ಗೋವುಗಳನ್ನು ಕಳವು ಮಾಡಿ ಸಾಗಿಸಲಾಗುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಅವರು ದೂರು ನೀಡಿದ್ದಾರೆ.
ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಜಾನುವಾರುಗಳನ್ನು ಸಾಗಿಸಲು ಬಳಸಿದ ಇನ್ನೋವಾ ಕಾರನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇದನ್ನೂ ಓದಿ : ಹಟ್ಟಿ ಚಿನ್ನದ ಗಣಿಯಲ್ಲಿ ನೇಮಕಾತಿ : 70 ಸಾವಿರ ರೂ. ಭರ್ಜರಿ ಸ್ಯಾಲರಿ


















