ಅಲ್ಲು ಅರ್ಜುನ್ ನಟಿಸಿರುವ ‘ಪುಷ್ಪ’ ಸಿನಿಮಾ ಯಶ್ ನಟನೆಯ ‘ಕೆಜಿಎಫ್’ ಟಾರ್ಗೆಟ್ ಮಾಡುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
‘ಪುಷ್ಪ’ ಮೊದಲ ಪಾರ್ಟ್ ಸಂದರ್ಭದಲ್ಲೂ ‘ಕೆಜಿಎಫ್’ ಮುಂದಿಟ್ಟುಕೊಂಡೇ ಪ್ರಚಾರ ಮಾಡಿದ್ದರು. ‘ಕೆಜಿಎಫ್’ ದಾಖಲೆ ಮುರಿಯುತ್ತೇವೆ ಎಂಬುವುದು ಚಿತ್ರ ತಂಡದ ಉದ್ಧೇಶವಾಗಿದೆ. ಹೀಗಾಗಿ ‘ಪುಷ್ಪ 2’ ಬಿಡುಗಡೆಯ ಸಮಯ ಹತ್ತಿರ ಬರುತ್ತಿದ್ದಂತೆ ‘ಕೆಜಿಎಫ್ 2’ ದಾಖಲೆ ಮೇಲೆ ಕಣ್ಣು ನೆಟ್ಟಿದೆ.
ಎನ್ ಸಿನಿಮಾಸ್ ಸಂಸ್ಥೆ ‘ಪುಷ್ಪ 2’ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಣೆ ಮಾಡುವ ಹಕ್ಕನ್ನು ಪಡೆದುಕೊಂಡಿದೆ. ಈ ಸಂಸ್ಥೆಯ ಮಾಲೀಕ ಇತ್ತೀಚೆಗೆ ‘ಕೆಜಿಎಫ್ 2’ ಚಿತ್ರದ ಬಗ್ಗೆ ಹೇಳಿಕೆ ನೀಡಿದ್ದರು. ಕರ್ನಾಟಕದಲ್ಲಿ ‘ಕೆಜಿಎಫ್ 2’ ಬಿಗ್ ರಿಲೀಸ್ ಆಗಿತ್ತು. ಅದನ್ನೂ ಮೀರಿಸುವಂತೆ ‘ಪುಷ್ಪ 2’ ರಿಲೀಸ್ ಮಾಡುತ್ತೇವೆ ಎಂದಿದ್ದರು.
ಹೀಗಾಗಿ ಈ ಬಾರಿಯೂ ಕೆಜಿಎಫ್ ದಾಖಲೆ ಮೇಲೆಯೇ ಪುಷ್ 2 ಕಣ್ಣು ನೆಟ್ಟಿದೆ. ಹೀಗಾಗಿ ಕರ್ನಾಟಕದಲ್ಲಿ ಹೆಚ್ಚು ಸ್ಕ್ರೀನ್ ಗಳಲ್ಲಿ ಬಿಡುಗಡೆ ಮಾಡಲು ಪುಷ್ಪ 2 ಮುಂದಾಗಿದೆ. ಇದರಿಂದಾಗಿ ಆ ಸಮಯದಲ್ಲಿ ಬಿಡುಗಡೆಯಾಗುವ ಕನ್ನಡದ ಸಿನಿಮಾಗಳಿಗೆ ತೊಂದರೆ ತಪ್ಪಿದ್ದಲ್ಲ ಎನ್ನಲಾಗುತ್ತಿದೆ. ಈ ಹುನ್ನಾರಕ್ಕೆ ಈಗ ಕನ್ನಡದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಅಲ್ಲದೇ, ಕರ್ನಾಟಕದಲ್ಲಿ ‘ಪುಷ್ಪ 2’ ಟಿಕೆಟ್‌ನ ಬೆಲೆ ಕೂಡ ದುಬಾರಿಯಾಗಲಿದೆ. ಮೊದಲ ದಿನ ಫ್ಯಾನ್ಸ್ ಶೋಗಳಿಗೆ ಟಿಕೆಟ್ ಬೆಲೆ ಸುಮಾರು 2 ಸಾವಿರದ ಗಡಿ ದಾಟಬಹುದು. ಸಿಂಗಲ್ ಸ್ಕ್ರೀನ್‌ಗಳಲ್ಲಿ 250 ರಿಂದ 450 ರೂ. ವರೆಗೆ ಇರಲಿದೆ ಎನ್ನಲಾಗುತ್ತಿದೆ.