ಅಲ್ಲು ಅರ್ಜುನ್ ನಟನೆಯ ಪುಷ್ಪ 2: ದಿ ರೂಲ್’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ.
ಈಗಾಗಲೇ ಈ ಚಿತ್ರ ಹಲವು ದಾಖಲೆಗಳನ್ನು ನಿರ್ಮಿಸಿ ಮುನ್ನುಗ್ಗುತ್ತಿದೆ. ಸದ್ಯ ‘ಪುಷ್ಪ 2’ ಚಿತ್ರ ‘ಆರ್ಆರ್ಆರ್’ ಚಿತ್ರದ ಗಳಿಕೆ ದಾಖಲೆ ಮುರಿದು ಮುನ್ನುಗ್ಗುತ್ತಿದೆ. ರಾಜಮೌಳಿ ನಿರ್ದೇಶನದ, ಜೂನಿಯರ್ ಎನ್ಟಿಆರ್-ರಾಮ್ ಚರಣ್ ನಟನೆಯ ‘ಪುಷ್ಪ 2’ ಚಿತ್ರ ವಿಶ್ವ ಬಾಕ್ಸ್ ಆಫೀಸ್ ನಲ್ಲಿ 1230 ಕೋಟಿ ರೂ. ಗಳಿಸಿ ಮುನ್ನುಗ್ಗುತ್ತಿದೆ. ಅಲ್ಲದೇ, ಪುಷ್ಪ ಚಿತ್ರದ ದಾಖಲೆಯನ್ನೂ ಎರಡನೇ ಭಾಗ ಮೀರಿಸಿದೆ.
ಆದರೆ, ಮುಂದಿನ ದಿನಗಳಲ್ಲಿ ಸಿನಿಮಾದ ಗಳಿಕೆ ನಿಧಾನವಾಗಿ ತಗ್ಗುತ್ತ ಸಾಗಲಿದೆ. ಈ ಚಿತ್ರ ‘ದಂಗಲ್’ (1790 ಕೋಟಿ ರೂಪಾಯಿ) ಹಾಗೂ ‘ಬಾಹುಬಲಿ 2’ (2070) ಕೋಟಿ ರೂ. ಗಳಿಕೆ ಹಿಂದಿಕ್ಕುವುದು ಅನುಮಾನ ಎನ್ನಲಾಗುತ್ತಿದೆ.
ಪಾಯಿ ಗಳಿಕೆಯನ್ನು ಹಿಂದಿಕ್ಕೋದು ಅನುಮಾನ ಎಂದು ಹೇಳಲಾಗುತ್ತಿದೆ. ಪ್ರೇಕ್ಷಕರು ಹಾಗೂ ಅಭಿಮಾನಿಗಳು ಮಾತ್ರ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.
ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ‘ಪುಷ್ಪ 3’ ಸಿನಿಮಾದ ಸಿದ್ಧತೆ ನಡೆಯುತ್ತಿದೆ ಎನ್ನಲಾಗಿದೆ.