ಹುಬ್ಬಳ್ಳಿ: ಹುಬ್ಬಳ್ಳಿ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಉಪ ಮೇಯರ್ ದುರಗಮ್ಮ ಬಿಜವಾಡ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆದಿದ್ದು, ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ಹಳೆ ಹುಬ್ಬಳ್ಳಿ ಹೆರಿಗೆ ಆಸ್ಪತ್ರೆಯನ್ನು ಸರ್ಕಾರದ ಸುಪರ್ದಿಗೆ ಕೊಡುವ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿದೆ.
ಮಹಾನಗರ ಪಾಲಿಕೆಯಿಂದಲೇ ಆಸ್ಪತ್ರೆ ಮುನ್ನಡೆಸುವಂತೆ ಬಿಜೆಪಿ ಸದಸ್ಯರು ವಾದ ಮಾಡುತ್ತಿದ್ದರೆ, ಆರೋಗ್ಯ ಇಲಾಖೆಗೆ ಕೊಡುವಂತೆ ವಿರೋಧ ಪಕ್ಷದ ಸದಸ್ಯರು ವಾದ ಮಾಡಿದ್ದಾರೆ. ವಾದ- ಪ್ರತಿವಾದ ಮುಂದುವರೆದು ಅದೀಗ ಪ್ರತಿಭಟನೆಗೆ ತಿರುಗಿದೆ. ಬಾವಿಗೆ ನುಗ್ಗಿ ಕಾಂಗ್ರೆಸ್ ಮತ್ತು ಎಂಐಎಂ ಸದಸ್ಯರ ಪ್ರತಿಭಟನೆ ನಡೆಸಿ, ನಮ್ಮ ಕೈಲಿ ಆಗದೆ ಇದ್ದಾಗ ಆರೋಗ್ಯ ಇಲಾಖೆಗೆ ಕೊಟ್ಟರೆ ತಪ್ಪೇನು ಎಂದು ಪ್ರಶ್ನೆ ಮಾಡಿದ್ದಾರೆ.