ಮಂಗಳೂರು: ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಒಟ್ಟು 398 ಸಾರ್ವಜನಿಕ ಗಣೇಶೋತ್ಸವ ನಡೆಯಲಿದೆ.
ಕಮಿಷನರೆಟ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 172 ಕಡೆ ಗಣೇಶೋತ್ಸವ ಇದೆ. ಉತ್ತರ ಉಪವಿಭಾಗದ ಪಣಂಬೂರು -7, ಕಾವೂರು-15, ಬಜಪೆ-11, ಸುರತ್ಕಲ್-14, ಮೂಲ್ಕಿ-19, ಮೂಡುಬಿದಿರೆ-29. ದಕ್ಷಿಣ ಉಪ ವಿಭಾಗ ವ್ಯಾಪ್ತಿಯ ಮಂಗಳೂರು ಗ್ರಾಮಾಂತರ-11, ಕಂಕನಾಡಿ ನಗರ – 6, ಉಳ್ಳಾಲ-10, ಕೊಣಾಜೆ-8. ಕೇಂದ್ರ ಉಪವಿಭಾಗದ ಮಂಗಳೂರು ಉತ್ತರ-5, ಮಂಗಳೂರು ದಕ್ಷಿಣ-14, ಉರ್ವ-5, ಮಂಗಳೂರು ಪೂರ್ವ-13, ಬರ್ಕೆ ಠಾಣೆ-5.
ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಒಟ್ಟು 226 ಗಣೇಶೋತ್ಸವಗಳಿವೆ. ಬಂಟ್ವಾಳ ನಗರ-12, ಬಂಟ್ವಾಳ ಗ್ರಾಮಾಂತರ-15, ವಿಟ್ಲ-20, ಬೆಳ್ತಂಗಡಿ-25, ಧರ್ಮಸ್ಥಳ-22, ಪುಂಜಾಲಕಟ್ಟೆ-7, ವೇಣೂರು-20, ಪುತ್ತೂರು ನಗರ-15, ಪುತ್ತೂರು ಗ್ರಾಮಾಂತರ-17, ಉಪ್ಪಿನಂಗಡಿ-17, ಕಡಬ-13, ಸುಳ್ಯ-15, ಸುಬ್ರಹ್ಮಣ್ಯ -10, ಬೆಳ್ಳಾರೆ-18.