ಬಾಗಲಕೋಟೆ: ಪೊಲೀಸ್ ಗಸ್ತು ವಾಹನಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ಮಂಗಳಾರತಿ ಹಾಡು ಹೇಳುವುದರ ಮೂಲಕ ಪಿಎಸ್ ಐ ಭಾವೈಕ್ಯತೆ ಮೆರೆದಿದ್ದಾರೆ.
ಮುಸ್ಲಿಂ ಸಮುದಾಯದ ಶಹಜಾನ್ ನಾಯಕ್ ಭಾವೈಕ್ಯತೆ ಮೆರೆದಿದ್ದಾರೆ. ಇಳಕಲ್ ಪೊಲೀಸ್ ಠಾಣೆಯ ನೂತನ ಗಸ್ತು ವಾಹನಕ್ಕೆ ಪೂಜಾ ಕಾರ್ಯಕ್ರಮ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಪಿಎಸ್ ಐ ಶಹಜಾನ್ ಹಿಂದೂ ಧರ್ಮದ ಸಂಸ್ಕೃತಿಯಂತೆ ಪೂಜೆ ನೆರವೇರಿಸಿದ್ದಾರೆ. ಸಮವಸ್ತ್ರದಲ್ಲೇ ಆರತಿ ಬೆಳಗಿ ಮಂಗಳಾರತಿ ಹಾಡಿದ್ದಾರೆ.
ಸಾಧು ಮಹಾತ್ಮರ ಪಾದಕೆ ಆರತಿ ಬೆಳಗೋಣ ಬಾ ಎಂದು ಹಾಡು ಹಾಡಿದ್ದಾರೆ. ಪಿಎಸ್ ಐ ಶಹಾಜನ್ ಅವರ ಭಾವೈಕ್ಯತೆಯ ಮನೋಭಾವಕ್ಕೆ ಸ್ಥಳೀಯರು ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಟ್ರಾಫಿಕ್ ಕರ್ತವ್ಯದ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗೆ ಹಣ ವಾಪಸ್ ನೀಡಿ ಕಣ್ಣೀರು ಒರಿಸಿ ಶಹಜಾನ್ ವೈರಲ್ ಆಗಿದ್ದರು. ಈಗ ಭಾವೈಕ್ಯತೆ ಮೆರೆದು ವೈರಲ್ ಆಗಿದ್ದಾರೆ.