ಲಾಸ್ ಏಂಜಲೀಸ್: ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಪ್ರತಿಷ್ಠಿತ ಆಸ್ಕರ್ (Oscars 2025) ಪ್ರಶಸ್ತಿ ಘೋಷಣೆ ಮಾಡಲಾಗಿದೆ. 97ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಅದ್ಧೂರಿಯಾಗಿ ನಡೆದಿದೆ. ಮತ್ತೊಂದೆಡೆ, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿದ್ದ, ಹಿಂದಿ ಭಾಷೆಯ ‘ಅನುಜಾ’ ಕಿರುಚಿತ್ರವು ಆಸ್ಕರ್ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ.
ಅನುಜಾ ಕಿರುಚಿತ್ರವು ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿತ್ತು. ಹಾಗಾಗಿ, ಹೆಚ್ಚಿನ ನಿರೀಕ್ಷೆಗಳು ಇದ್ದವು. ಆದರೆ, ವಿಕ್ಟೋರಿಯಾ ವಾರ್ಮರ್ ಡ್ಯಾಮ್ ಹಾಗೂ ಟ್ರೆಂಟ್ ಅವರ ಐ ಆ್ಯಮ್ ನಾಟ್ ಎ ರೋಬೊ ಕಿರುಚಿತ್ರವು ಆಸ್ಕರ್ ಗೆದ್ದುಕೊಂಡಿದೆ. 9 ವರ್ಷದ ಬಾಲಕಿ ಸುತ್ತ ನಡೆಯುವುದೇ ಅನುಜಾ ಕಿರುಚಿತ್ರವಾಗಿತ್ತು. ಇದು 12 ನಿಮಿಷದ ಕಿರುಚಿತ್ರವಾಗಿದೆ.
ಪ್ರಶಸ್ತಿ ವಿಜೇತರ ಪಟ್ಟಿ
- ಬೆಸ್ಟ್ ಸಪೋರ್ಟಿಂಗ್ ಆ್ಯಕ್ಟರ್- ಯುರಾ ಬೋರಿಸೋವ್ (ಅನೋರಾ)
- ಬೆಸ್ಟ್ ಆ್ಯನಿಮೇಟೆಡ್ ಫೀಚರ್- ಫ್ಲೋ
- ಬೆಸ್ಟ್ ಆ್ಯನಿಮೇಟೆಡ್ ಶಾರ್ಟ್ ಮೂವಿ- ಇನ್ ದಿ ಶಾಡೋ ಆಫ್ ದಿ ಸಿಪ್ರೆಸ್
- ಬೆಸ್ಟ್ ಕಾಸ್ಟ್ಯೂಮ್ ಡಿಸೈನ್- ವಿಕ್ಡ್
- ಬೆಸ್ಟ್ ಒರಿಜಿನಲ್ ಸ್ಕ್ರೀನ್ ಪ್ಲೇ- ಅನೋರಾ
- ಬೆಸ್ಟ್ ಅಡಾಪ್ಟೆಟ್ ಸ್ಕ್ರೀನ್ ಪ್ಲೇ- ಕಾನ್ ಕ್ಲೇವ್
- ಬೆಸ್ಟ್ ಮೇಕಪ್ ಆ್ಯಂಡ್ ಹೇರ್ ಸ್ಟೈಲಿಂಗ್- ದಿ ಸಬ್ ಸ್ಟನ್ಸ್
- ಬೆಸ್ಟ್ ಎಡಿಟಿಂಗ್- ಅನೋರಾ (ಸಿಯಾನ್ ಬೇಕರ್)
- ಬೆಸ್ಟ್ ಸಪೋರ್ಟಿಂಗ್ ನಟಿ- ಜೋ ಸಲ್ಡಾನ
- ಬೆಸ್ಟ್ ಪ್ರೊಡಕ್ಷನ್ ಡಿಸೈನ್ – ವಿಕ್ಡ್
- ಬೆಸ್ಟ್ ಒರಿಜಿನಲ್ ಸಾಂಗ್ – ಎಲ್ ಮಲ್ (ಎಮಿಲಿಯ ಪೆರೇಜ್)
- ಬೆಸ್ಟ್ ಡಾಕ್ಯುಮೆಂಟರಿ ಶಾರ್ಟ್ – ದಿ ಓನ್ಲಿ ಗರ್ಲ್ ಇನ್ ದಿ ಆರ್ಕೆಸ್ಟ್ರಾ
- ಬೆಸ್ಟ್ ಡಾಕ್ಯುಮೆಂಟರಿ ಫೀಚರ್ – ನೋ ಅದರ್ ಲ್ಯಾಂಡ್
- ಬೆಸ್ಟ್ ಸೌಂಡ್- ಡ್ಯೂನ್-ಪಾರ್ಟ್ 2
- ಬೆಸ್ಟ್ ವಿಷ್ಯುವಲ್ ಎಫೆಕ್ಟ್- ಡ್ಯೂನ್-ಪಾರ್ಟ್ 2
- ಬೆಸ್ಟ್ ಸಿನಿಮಾಟೋಗ್ರಫಿ- ದಿ ಬ್ರ್ಯೂಟಲಿಸ್ಟ್
- ಬೆಸ್ಟ್ ಇಂಟರ್ ನ್ಯಾಷನಲ್ ಫೀಚರ್- ಐ ಆ್ಯಮ್ ಸ್ಟಿಲ್ ಹಿಯರ್