ನವದೆಹಲಿ: ಇಂದಿನಿಂದ ಮೂರು ದಿನಗಳ ಕಾಲ ಪ್ರಧಾನಿ ಮೋದಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಸದ್ಯ ಜೋರ್ಡಾನ್ ತಲುಪಿರುವ ಮೋದಿ ಬಳಿಕ ಇಥಿಯೋಪಿಯಾ, ಒಮಾನ್‌ಗೆ ಭೇಟಿ ನೀಡಲಿದ್ದಾರೆ.
ಈ ಕುರಿತು ಭಾನುವಾರ (ಡಿ.14) ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಮಾಹಿತಿ ನೀಡಿದ್ದರು. ರಾಜ ಅಬ್ದುಲ್ಲಾ II ಬಿನ್ ಅಲ್ ಹುಸೇನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಭೇಟಿ ಕೈಗೊಂಡಿದ್ದು, ಇಂದಿನಿಂದ ಡಿ.16ರವರೆಗೆ ಜೋರ್ಡಾನ್ ಪ್ರವಾಸದಲ್ಲಿರಲಿದ್ದಾರೆ. ಈಗಾಗಲೇ ಜೋರ್ಡಾನ್‌ನ ಅಮ್ಮನ್ ಪ್ರದೇಶಕ್ಕೆ ತಲುಪಿರುವ ಮೋದಿ ಅವರನ್ನು ಪ್ರಧಾನಿ ಜಾಫರ್ ಹಸನ್ ಅವರು ಸ್ವಾಗತಿಸಿದರು. ಪ್ರಧಾನಿ ಮೋದಿ ಜೋರ್ಡಾನ್‌ಗೆ ನೀಡುತ್ತಿರುವ ಮೊದಲ ಭೇಟಿಯಿದಾಗಿದೆ.
ದ್ವಿಪಕ್ಷೀಯ ವಾಣಿಜ್ಯ ಒಪ್ಪಂದಕ್ಕೆ ಅಂತಿಮ ಸ್ವರೂಪ ನೀಡುವುದು ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವುದು ಈ ಪ್ರವಾಸದ ಪ್ರಮುಖ ಗುರಿ. ಅದರಲ್ಲೂ ವಿಶೇಷವಾಗಿ ವ್ಯಾಪಾರ, ರಕ್ಷಣಾ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಹೊಂದಿದೆ ಎಂದು ಪ್ರಧಾನಿ ತಮ್ಮ ಪ್ರಯಾಣ ಪೂರ್ವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇನ್ನೂ ಡಿ.16ರಿಂದ 17ರವರೆಗೆ ಇಥಿಯೋಪಿಯಾಗೆ ಭೇಟಿ ನೀಡಲಿದ್ದು, ಇಥಿಯೋಪಿಯನ್ ಕೌಂಟರ್ ಡಾ. ಅಬಿಯ್ ಅಹ್ಮದ್ ಅಲಿ ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಲಿದ್ದಾರೆ. ಬಳಿಕ ಡಿ.17ರಿಂದ 18ರವರೆಗೆ ಒಮಾನ್‌ಗೆ ತೆರಳಲಿದ್ದು, ವಿಶೇಷ ಪಾಲುದಾರಿಕೆ, ವ್ಯಾಪಾರ ಸಂಪರ್ಕ ಹಾಗೂ ಹಲವು ದಾಖಲೆಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ ಎಂದು ಹೇಳಿದರು.
ಇದನ್ನೂ ಓದಿ : ರಾಜ್ಯದಲ್ಲೆಲ್ಲ ಕೂಲ್ ಕೂಲ್ ಕ್ಲೈಮೆಟ್ | ಇನ್ನೂ 3 ದಿನ ಮುಂದುವರೆಯುತ್ತೇ ಚಳಿ



















