ಪ್ರಧಾನಿ ನರೇಂದ್ರ ಮೋದಿ ಅವರು ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರ ತಾಯಿಗೆ ಪತ್ರ ಬರೆದು ಧನ್ಯವಾದ ಅರ್ಪಿಸಿದ್ದಾರೆ.
ನೀರಜ್ ಚೋಪ್ರಾ ಅವರ ತಾಯಿ ಸರೋಜ್ ದೇವಿ ಅವರಿಗೆ ಪತ್ರ ಬರೆದಿದ್ದಾರೆ. ಚೋಪ್ರಾ ಅವರ ತಾಯಿ ಮಾಡಿದ ಚುರ್ಮಾ ಸಿಹಿ ತಿಂಡಿಯನ್ನು ಪ್ರಧಾನಿ ಮೋದಿಗೆ ನೀಡಿದ್ದರು. ನಾನು ಹಾಗೂ ನೀರಜ್ ಆಗಾಗ್ಗೆ ಚುರ್ಮಾ ಬಗ್ಗೆ ಚರ್ಚಿಸುತ್ತೇವೆ. ಆದರೆ ಅದನ್ನು ಸೇವಿಸಿದ ನಂತರ ನಾನು ಭಾವುಕನಾಗಿದ್ದೇನೆ. ಈ ಪ್ರೀತಿ ತುಂಬಿದ ಉಡುಗೊರೆ ನನಗೆ ನನ್ನ ತಾಯಿಯ ನೆನಪು ಮಾಡಿತು ಎಂದು ಪ್ರಧಾನಿ ಮೋದಿ ಪತ್ರದಲ್ಲಿ ಬರೆದಿದ್ದಾರೆ.
ನಿನ್ನೆ ಜಮೈಕಾದ ಪ್ರಧಾನಿಯವರ ಭೇಟಿಯ ಸಂದರ್ಭದಲ್ಲಿ ಆಯೋಜಿಸಿದ್ದ ಭೋಜನ ಕೂಟದಲ್ಲಿ ನಾನು ನೀರಜ್ ಅವರನ್ನು ಭೇಟಿಯಾದೆ. ನೀವು ನೀಡಿದ ಚುರ್ಮಾವನ್ನು ಅವರು ನನಗೆ ನೀಡಿದಾಗ ತುಂಬಾ ಸಂತೋಷವಾಯಿತು. ತಾಯಿ ಧೈರ್ಯ, ಪ್ರೀತಿ ಮತ್ತು ಸಮರ್ಪಣೆಯ ಸಾಕಾರಮೂರ್ತಿ. ನವರಾತ್ರಿಯ ಒಂದು ದಿನ ಮುಂಚಿತವಾಗಿ ನನಗೆ ಈ ಊಟ ಸಿಕ್ಕಿದ್ದು ಕಾಕತಾಳೀಯ. ನಾನು ನವರಾತ್ರಿ ದಿನಗಳಲ್ಲಿ ಉಪವಾಸ ಮಾಡುತ್ತೇನೆ ಎಂದು ಬರೆದಿದ್ದಾರೆ.
ನೀರಜ್ ಗೆ ಪದಕ ಗೆಲ್ಲವು ನಿಮ್ಮ ಆಹಾರ ಶಕ್ತಿ ನೀಡಿದಂತೆ, ನನಗೆ ಈ ಚುರ್ಮಾ ಮುಂದಿನ ಒಂಭತ್ತು ದಿನಗಳವರೆಗೆ ರಾಷ್ಟ್ರದ ಸೇವೆ ಮಾಡಲು ಸಹಾಯ ಮಾಡಲಿದೆ ಎಂದು ಧನ್ಯವಾದ ಅರ್ಪಿಸಿದ್ದಾರೆ.