ದೆಹಲಿ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 2 ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿದ್ದಾರೆ. ಇಂದು (ಡಿ.4) ಸಂಜೆ 6:35ರ ವೇಳೆಗೆ ಪುಟಿನ್ ದೆಹಲಿಯ ಪಾಲಮ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.
ಪ್ರಧಾನಿ ಮೋದಿ ಇಂದು ರಾತ್ರಿ ಪುಟಿನ್ ಅವರಿಗಾಗಿ ವಿಶೇಷ ಔತಣ ಕೂಟವನ್ನೂ ಕೂಡ ಆಯೋಜಿಸಿದ್ದಾರೆ. 2022ರ ಫೆಬ್ರವರಿಯಲ್ಲಿ ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದ ನಂತರ ಪುಟಿನ್ ಅವರ ಮೊದಲ ಭಾರತ ಭೇಟಿ ಇದಾಗಿದೆ.
ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯ ಹಿನ್ನೆಲೆ ವಿಶ್ವದ ಪ್ರಬಲ ನಾಯಕರಾದ ಮೋದಿ ಮತ್ತು ಪುಟಿನ್ ಶುಕ್ರವಾರ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಇನ್ನು, ಭಾರತ-ಅಮೆರಿಕ ಮಧ್ಯೆ ಪರೋಕ್ಷ ತೆರಿಗೆ ಯುದ್ಧ ನಡೆಯುತ್ತಿರುವ ಹೊತ್ತಲ್ಲೇ ರಷ್ಯಾ ಅಧ್ಯಕ್ಷ ಭಾರತಕ್ಕೆ ಭೇಟಿ ನೀಡಿರುವುದು ಕತೂಹಲಕ್ಕೂ ಕಾರಣವಾಗಿದೆ.
ಇದನ್ನೂ ಓದಿ : ಬೆಂಗಳೂರಿನ ಈ ಪ್ರದೇಶಗಳಲ್ಲಿ ಡಿ.6ರಂದು ವಿದ್ಯುತ್ ವ್ಯತ್ಯಯ


















