ನವದೆಹಲಿ : ವಿಕಸಿತ ಭಾರತದ ನಿರ್ಮಾಣಕ್ಕೆ 11 ಸಂಕಲ್ಪಗಳನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
2047ಕ್ಕೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಾಣ ಮಾಡಲು ರಾಜ್ಯ ಸರ್ಕಾರಗಳು, ರಾಜಕೀಯ ಪಕ್ಷಗಳು, ಸಂಘಸಂಸ್ಥೆಗಳು, ನಾಗರಿಕರು 11 ಸಂಕಲ್ಪಗಳನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ.
ಸರಕಾರವಾಗಲಿ ಅಥವಾ ನಾಗರಿಕರಾಗಲಿ ಕೊಟ್ಟ ಜವಾಬ್ದಾರಿ ಪೂರ್ಣಗೊಳಿಸಬೇಕು. ರಾಜ್ಯ-ಕೇಂದ್ರ ಸರ್ಕಾರಗಳು ಸಬ್ ಕಾ ಸಾಥ್-ಸಬ್ ಕಾ ವಿಕಾಸ್ ನೀತಿಗಳನ್ನು ಪಾಲಿಸಬೇಕು. ಭ್ರಷ್ಟಾಚಾರ ವಿಷಯದಲ್ಲಿರಾಜಿ ಮಾಡಿಕೊಳ್ಳಬಾರದು. ಕಾನೂನುಗಳನ್ನು ಗೌರವಿಸಬೇಕು, ಪಾಲಿಸಬೇಕು. ವಸಾಹತುಶಾಹಿ ಮನಸ್ಥಿತಿಯಿಂದ ಹೊರಬಂದು ದೇಶದ ಸಂಸ್ಕೃತಿ, ಪರಂಪರೆ ಕಾಪಾಡಬೇಕು. ಕುಟುಂಬ ರಾಜಕಾರಣದ ಪರಂಪರೆಯಿಂದ ದೂರ ಇರಬೇಕು. ಸಂವಿಧಾನದ ಬಳಕೆ ರಾಜಕೀಯವಾಗಿ ಆಗಬಾರದು. ಧರ್ಮದ ಆಧಾರದಲ್ಲಿ ಮೀಸಲು ನೀಡುವ ಮನೋಧರ್ಮ ಬದಲಿಯಾಗಬೇಕು. ಅರ್ಹರಿಗೆ ಮೀಸಲಾತಿ ಸಿಗುವಂತೆ ಮಾಡಬೇಕು. ಮಹಿಳಾ ಸಬಲೀಕರಣವಾಗಬೇಕು. ರಾಜಕೀಯ ಪಕ್ಷಗಳು ಅಭಿವೃದ್ಧಿ ಮಂತ್ರ ಪಠಿಸಬೇಕು. ಏಕ ಭಾರತ ಶ್ರೇಷ್ಠ ಭಾರತ’ ಪರಿಕಲ್ಪನೆ ಎಲ್ಲರೂ ಇರಬೇಕು ಎಂದು ಹೇಳಿದ್ದಾರೆ.