ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಷ್ಟ ಲಕ್ಷ್ಮೀ ಮಹೋತ್ಸವಕ್ಕೆ ಚಾಲನೆ ನೀಡಿದ್ದಾರೆ.
ಅಷ್ಟಲಕ್ಷ್ಮಿ ಮಹೋತ್ಸವವು ಈಶಾನ್ಯ ಭಾರತದಲ್ಲಿ ತನ್ನ ಅಸ್ತಿತ್ವ ಹಾಗೂ ಸಂಸ್ಕೃತಿ ಉಳಿಸಿಕೊಂಡಿದೆ. ಭಾರತದ ಬೆಳವಣಿಗೆಯನ್ನು ಹೆಚ್ಚಿಸಲು ಅಪಾರ ಸಾಮರ್ಥ್ಯವನ್ನು ಹೊಂದಿದೆ ಎಂದಿದ್ದಾರೆ.
ಭಾರತದ ಬೆಳವಣಿಗೆಯಲ್ಲಿ ಪಾಶ್ಚಿಮಾತ್ಯ ಜಗತ್ತು ದೊಡ್ಡ ಪಾತ್ರ ವಹಿಸಿದೆ. ಈ ಪಶ್ಚಿಮ-ಕೇಂದ್ರಿತ ಅವಧಿಯ ನಂತರ 21ನೇ ಶತಮಾನವು ಈಶಾನ್ಯ ಭಾರತಕ್ಕೆ ಸೇರಿದೆ ಎನ್ನಬಹುದು. ಇತ್ತೀಚಿನ ದಶಕಗಳಲ್ಲಿ ಬೆಂಗಳೂರು, ಮುಂಬಯಿ ಮತ್ತು ದೆಹಲಿಯಂತಹ ಭಾರತದ ಪ್ರಮುಖ ನಗರಗಳು ಬೆಳೆಯುತ್ತಿವೆ. ಮುಂಬರುವ ವರ್ಷಗಳಲ್ಲಿ ಈಶಾನ್ಯದ ನಗರಗಳು ಅದೇ ರೀತಿ ಬೆಳೆಯಬೇಕು ಎಂದಿದ್ದಾರೆ.
ಡಿಸೆಂಬರ್ 6ರಿಂದ 8ರವರೆಗೆ ಆಯೋಜಿಸಲಾದ ಈ ಕಾರ್ಯಕ್ರಮ ಈಶಾನ್ಯ ಭಾರತದ ಸಂಸ್ಕೃತಿಯನ್ನು ಆಚರಿಸುತ್ತದೆ. ಇಲ್ಲಿ ಈಶಾನ್ಯ ಭಾರತದ ಜವಳಿ ವಲಯ, ಸಾಂಪ್ರದಾಯಿಕ ಕರಕುಶಲತೆ, ಪ್ರವಾಸೋದ್ಯಮ ಸಾಮರ್ಥ್ಯ ಮತ್ತು GI ಟ್ಯಾಗ್ ಮಾಡಿದ ಉತ್ಪನ್ನಗಳ ಪ್ರದರ್ಶನ ನಡೆಯಲಿದ್ದು, ಇದು ಇನ್ನೂ ಬೆಳೆಯಲಿ ಎಂದಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಕುಶಲಕರ್ಮಿಗಳೊಂದಿಗೆ ಸಂವಾದ ನಡೆಸಿದ್ದಾರೆ.