ಗಯಾನಾ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಗಯಾನಾ ಅಧ್ಯಕ್ಷ ಮೊಹಮ್ಮದ್ ಇರ್ಫಾನ್ ಅಲಿ ಹಾಡಿ ಹೊಗಳಿದ್ದಾರೆ.
“ಎಲ್ಲ ನಾಯಕರಲ್ಲಿ ನೀವೊಬ್ಬ ಚಾಂಪಿಯನ್” ಎಂದು ಮೋದಿ ಅವರನ್ನು ಶ್ಲಾಘಿಸಿದ್ದಾರೆ. ಗಯಾನಾ ಮತ್ತು ಇತರ ರಾಷ್ಟ್ರಗಳಲ್ಲಿ ಅವರ ಪ್ರಭಾವವನ್ನು ಪ್ರಸ್ತಾಪಿಸಿರುವ ಅವರು ನೀವು ಇಲ್ಲಿ ಬಂದಿರುವುದು ನಮ್ಮ ದೊಡ್ಡ ಗೌರವ. ನೀವು ನಾಯಕರಲ್ಲಿ ಚಾಂಪಿಯನ್ ಆಗಿದ್ದೀರಿ.
ಭಾರತವನ್ನು ನೀವು ನಂಬಲಾಗದಷ್ಟು ಮುನ್ನಡೆಸಿದ್ದೀರಿ. ನೀವು ಅಭಿವೃದ್ಧಿಶೀಲ ಜಗತ್ತಿಗೆ ಬೆಳಕನ್ನು ತೋರಿಸಿದ್ದೀರಿ ಎಂದು ಹಾಡಿ ಹೊಗಳಿದ್ದಾರೆ.
ಪ್ರಧಾನಿ ಮೋದಿ 56 ವರ್ಷಗಳಲ್ಲಿ ಈ ದೇಶಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ನಾಯಕರಾಗಿದ್ದಾರೆ. ಅವರನ್ನು ಅಧ್ಯಕ್ಷ ಇರ್ಫಾನ್ ಅಲಿ ಮತ್ತು ಹಲವಾರು ಕ್ಯಾಬಿನೆಟ್ ಸಚಿವರು ಆಹ್ವಾನಿಸಿದ್ದಾರೆ.