ಪುತ್ತೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು(Praveen Nettaru ) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಪೊಲೀಸರು (police)ಕೊನೆಗೂ ವಶಕ್ಕೆ ಪಡೆದಿದ್ದಾರೆ.
2022ರ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ(BJP) ಯುವ ಮುಖಂಡನ ಹತ್ಯೆ ನಡೆದಿತ್ತು. ಪ್ರಕರಣಕ್ಕೆ (Murder Case) ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಅತೀಕ್ ಅಹಮದ್ ನನ್ನು ರಾಷ್ಟ್ರೀಯ ತನಿಖಾ ದಳ (NIA) ಬಂಧಿಸಿದೆ.
ಬಂಧೀತ ಆರೋಪಿ ಅತೀಕ್ ಅಹಮದ್(Atiq Ahmed) ಪ್ರಕರಣದ 21ನೇ ಆರೋಪಿಯಾಗಿದ್ದು, ಹತ್ಯೆ ಪ್ರಕರಣದ ಮುಖ್ಯ ಸಂಚುಕೋರ ಮುಸ್ತಫಾ ಫೈಚಾರ್ ಗೆ ಆಶ್ರಯ ನೀಡಿದ್ದ ಎನ್ನಲಾಗಿದೆ. ಅಲ್ಲದೇ ಹತ್ಯೆ ನಂತರ ಮುಸ್ತಫಾ ಫೈಚಾರ್ ಚೆನ್ನೈಗೆ ಪರಾರಿಯಾಗಲು ನೆರವಾಗಿದ್ದ ಎನ್ನಲಾಗಿದೆ. ಅತೀಕ್ ಅಹಮದ್ ಪಿಎಫ್‌ಐ ಸಂಘಟನೆಯ ಸದಸ್ಯ ಕೂಡ ಎನ್ನಲಾಗಿದೆ.
2022ರ ಜುಲೈ 26ರಂದು ನಡೆದಿದ್ದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ದಳ ಇಲ್ಲಿಯವರಗೂ 20 ಜನ ರೋಪಿಗಳನ್ನು ಬಂಧಿಸಿದೆ. ತಲೆ ಮರೆಸಿಕೊಂಡಿರುವ ಮೂವರು ಸೇರಿದಂತೆ 23 ಆರೋಪಿಗಳನ್ನು ಚಾರ್ಜ್ ಶೀಟ್(Charge sheet) ನಲ್ಲಿ ಉಲ್ಲೇಖಿಸಲಾಗಿದೆ.