ನಟ ಪ್ರಥಮ್ ಡಿ ಬಾಸ್ ಅಭಿಮಾನಿಗಳ ವಿರುದ್ಧ ಕಿಡಿಕಾರಿದ್ದಾರೆ.
ದರ್ಶನ್ ಅಭಿಮಾನಿಗಳ ಫೇಸ್ ಬುಕ್ ಪೇಜ್ ನಲ್ಲಿ ತನ್ನ ಸಿನಿಮಾದ ಬಗ್ಗೆ ಅಶ್ಲೀಲವಾಗಿ ವೈರಲ್ ಮಾಡುತ್ತಿದ್ದಾರೆ ಎಂದು ನಟ ಪ್ರಥಮ್ ಖಂಡನೆ ವ್ಯಕ್ತಪಡಿಸಿದ್ದಾರೆ. ಟ್ರೋಲ್ ವಿಚಾರವಾಗಿ ಅಶ್ಲೀಲ ಟ್ರೋಲ್ ಮಾಡಿರುವವರ ವಿರುದ್ಧ ಸ್ಟೇ ಆರ್ಡರ್ ದಾಖಲೆ ಸಮೇತ ತಂದಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಶ್ಲೀಲವಾಗಿ ತೇಜೋವಧೆ ಮಾಡುವುದು ತಪ್ಪು. ಕೋಟಿಗಟ್ಟಲೆ ಸಾಲ ಮಾಡಿ ಸಿನಿಮಾ ಮಾಡಿರುವೆ. ಯಾಕೆ ನನ್ನನ್ನು ಟ್ರೋಲ್ ಮಾಡ್ತೀರಿ? ಎಂದು ಕಿಡಿಕಾರಿದ್ದಾರೆ.