ಮಾಜಿ ಸಂಸದ ಪ್ರತಾಪ್ ಸಿಂಹ ಔಟ್ ಡೇಟೆಡ್ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅಣಕಿಸಿದ್ದಾರೆ.
ಪ್ರತಾಪ್ ಸಿಂಹನನ್ನು ನರಿಗೆ ಹೋಲಿಸಿ ಖರ್ಗೆ ಟ್ವೀಟ್ ಮಾಡಿದ್ದು, ಬಿಜೆಪಿಯಿಂದ ತಿರಸ್ಕೃತಗೊಂಡಿರುವ ಪ್ರತಾಪ್ ಸಿಂಹ, ನನ್ನ ಬಗ್ಗೆ ಮಾತನಾಡಿ, ಮಾರುಕಟ್ಟೆ ಕುದುರಿಸಿಕೊಳ್ಳುವ ತವಕದಲ್ಲಿದ್ದಾರೆ. ವಿಜಯೇಂದ್ರ ಹಠಾವೋ ಬಣದಲ್ಲಿದ್ದ ಪ್ರತಾಪ್ ಸಿಂಹ, ತಮ್ಮ ಅಭಿಯಾನದಲ್ಲಿ ಯಶಸ್ಸನ್ನ ಮೊದಲು ಪಡೆಯಲಿ, ನಿಮಗೆ ಬಿಜೆಪಿ ಟಿಕೆಟ್ ನೀಡದೆ ಮೂಲೆಗೆ ತಳ್ಳಿದ್ದೇಕೆ ? ಪಕ್ಷದಲ್ಲಿಯೂ ಹುದ್ದೆ ನೀಡದೇ ನಿರ್ಲಕ್ಷ್ಯ ಮಾಡಿದ್ದು ಅರ್ಹತೆ ಇಲ್ಲದಿರುವುದಕ್ಕಾ?
ನರಿಗಳು ಸಿಂಹ ಎಂದು ಹೆಸರಿಟ್ಟ ಮಾತ್ರಕ್ಕೆ ಸಿಂಹವಾಗಲ್ಲ. ನನ್ನ ಹೆಸರಿನ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು, ನಿಮ್ಮ ರಾಜಕೀಯ ಭವಿಷ್ಯದ ಬಗ್ಗೆ ತಲೆಕೆಡಿಸಿಕೊಳ್ಳಿ ಎಂದು ಪ್ರತಾಪ್ ಸಿಂಹಗೆ ಖರ್ಗೆ ಟಾಂಗ್ ನೀಡಿದ್ದಾರೆ.