ಕೆಜಿಎಫ್ ಚಿತ್ರದ ನಂತರ ಪ್ರಶಾಂತ್ ನೀಲ್ ಅವರು ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ನಟ ನಟಿಯರು ಕೂಡ ಅವರ ಜೊತೆ ಸಿನಿಮಾ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.
ಇದೀಗ ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್ಟಿಆರ್ ಸಿನಿಮಾ ಘೋಷಣೆ ಆಗಿ ಕೆಲವು ವರ್ಷಗಳೇ ಕಳೆದಿವೆ. ಆದರೆ, ಸಿನಿಮಾ ಮಾತ್ರ ಇದುವರೆಗೂ ಸೆಟ್ಟೇರಿಲ್ಲ. ಈಗ ಚಿತ್ರದ ಶೂಟ್ ಭರದಿಂದ ಸಾಗುತ್ತಿದೆ. ಸಿನಿಮಾದ ರಿಲೀಸ್ ದಿನಾಂಕದ ಬಗ್ಗೆಯೂ ಮಾಹಿತಿ ಹೊರ ಬಿದ್ದಿದೆ. ಈ ಸಿನಿಮಾ 2026ರ ಜೂನ್ 25ರಂದು ಬಿಡುಗಡೆಯಾಗಲಿದೆ. ಈ ಪೋಸ್ಟರ್ ನೋಡಿದ ಅಭಿಮಾನಿಗಳಂತು ಒಂದು ಕಡೆ ಖುಷಿ ವ್ಯಕ್ತಪಡಿಸುತ್ತಿದ್ದರೆ, ಇನ್ನೊಂದು ಕಡೆ ವರ್ಷ ಕಾಯಬೇಕಾ? ಎಂದು ಬೇಸರ ವ್ಯಕ್ತಪಡಿಸಿದ್ದಾರೆ.