ನಟ ದಳಪತಿ ವಿಜಯ್ ಈಗಾಗಲೇ ರಾಜಕೀಯ ಪ್ರವೇಶಿಸಿದ್ದಾರೆ. ‘ತಮಿಳಗ ವೆಟ್ರಿ ಕಳಗಮ್’ (ಟಿವಿಕೆ) ಪಕ್ಷ ಕಟ್ಟಿ ಈಗ ರ್ಯಾಲಿ ನಡೆಸಿದ್ದಾರೆ.
ಇದು ಅವರ ಪಕ್ಷದ ರ್ಯಾಲಿ ಎನ್ನಲಾಗಿದೆ. ಈ ರ‍್ಯಾಲಿಯಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದಾರೆ. ರ್ಯಾಲಿಯಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡುವುದರ ಮೂಲಕ ಗುಡುಗಿದ್ದಾರೆ.
ವಿಜಯ್ ಅವರ ವೃತ್ತಿ ಜೀವನ ಉತ್ತುಂಗದಲ್ಲಿ ಇದೆ. ಅವರು ಪ್ರತಿ ಸಿನಿಮಾಗೆ ನೂರಾರು ಕೋಟಿ ರೂಪಾಯಿ ಪಡೆಯುತ್ತಾರೆ. ಈ ವೇಳೆಯೇ ಚಿತ್ರರಂಗ ತೊರೆದಿರುವ ಅವರು, ನಾನು ನನ್ನ ವೃತ್ತಿ ಜೀವನ ಉತ್ತುಂಗದಲ್ಲಿದ್ದಾಗಲೇ ಅದನ್ನು ತೊರೆದಿದ್ದೇನೆ. ನನ್ನ ಸಂಪಾದನೆ ತೊರೆದೆ. ನಿಮ್ಮ ವಿಜಯ್ ಆಗಿ ಇಲ್ಲಿದ್ದೇನೆ. ನಿಮ್ಮನ್ನು ನಂಬಿ ಬಂದಿದ್ದೇನೆ ಎಂದಿದ್ದಾರೆ.
‘ವಿಜಯ್ ಯಾರ ಹೆಸರನ್ನು ಏಕೆ ತೆಗೆದುಕೊಂಡು ಮಾತನಾಡುವುದಿಲ್ಲ? ನನಗೇನು ಭಯವೇ ಎಂದು ಅನೇಕರು ಕೇಳುತ್ತಾರೆ. ಯಾರ ಹೆಸರು ಹೇಳಿ ರಾಜಕೀಯ ಮಾಡಲು ಬಂದಿಲ್ಲ. ಮರ್ಯಾದೆ ಇಲ್ಲದೆ ಮಾತನಾಡಲು ನಾನು ಬಂದಿಲ್ಲ. ನಾನು ಚಾರಿತ್ರ್ಯದಿಂದ ರಾಜಕೀಯ ಮಾಡುತ್ತೇನೆ ಎಂದಿದ್ದಾರೆ. ಈ ಸಮಾವೇಶದಲ್ಲಿ ಸುಮಾರು ಐದರಿಂದ ಆರು ಲಕ್ಷ ಜನರು ಭಾಗವಹಿಸಿದ್ದರು. ಈಗಾಗಲೇ ದಳಪತಿ ತಮ್ಮ ಕೊನೆಯ ಚಿತ್ರವಾಗಿರುವ ‘ದಳಪತಿ 69’ ರಲ್ಲಿ ನಟಿಸುತ್ತಿದ್ದಾರೆ.