ಶ್ರೀನಗರ : ದೇಶ ವಿರೋಧಿ ಚಟುವಟಿಕೆಗಳನ್ನು ಉತ್ತೇಜಿಸುತ್ತಿದ್ದಾರೆ ಎಂಬ ಗಂಭೀರ ಆರೋಪದ ಮೇಲೆ ಜಮ್ಮುವಿನಲ್ಲಿರುವ ʻಕಾಶ್ಮೀರ್ ಟೈಮ್ಸ್ʼ ಪತ್ರಿಕಾ ಕಚೇರಿ ಮೇಲೆ ಗುರುವಾರ ಜಮ್ಮು ಮತ್ತು ಕಾಶ್ಮೀರ ಪೊಲೀಸರ ರಾಜ್ಯ ತನಿಖಾ ಸಂಸ್ಥೆ ದಾಳಿ ನಡೆಸಿದೆ. ಈ ವೇಳೆ, ಎಕೆ ರೈಫಲ್ಸ್, ಗ್ರೆನೇಡ್ ಲಿವರ್‌ಗಳು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ.

ಘಟನೆ ಬಳಿಕ ಅಶಾಂತಿ ಸೃಷ್ಟಿಸುವುದು, ಪ್ರತ್ಯೇಕತಾ ವಾದವನ್ನ ವೈಭವೀಕರಿಸುವುದು, ಅಲ್ಲದೇ ದೇಶದ ಹಾಗೂ ಕೇಂದ್ರಾಡಳಿತ ಪ್ರದೇಶದ ಸಾರ್ವಭೌಮತ್ವಕ್ಕೆ ಮತ್ತು ಪ್ರಾದೇಶಕ್ಕೆ ಸಮಗ್ರತೆಗೆ ಧಕ್ಕೆ ತರುವ ಆರೋಪಗಳ ಮೇಲೆ ಕಾಶ್ಮೀರ್ ಟೈಮ್ಸ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪ್ರಕರಣದಲ್ಲಿ ಕಾಶ್ಮೀರ್ ಟೈಮ್ಸ್ ಕಾರ್ಯನಿರ್ವಾಹಕ ಸಂಪಾದಕಿ ಅನುರಾಧಾ ಭಾಸಿನ್ ಅವರ ಹೆಸರನ್ನೂ ಉಲ್ಲೇಖಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಬಳಿಕ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಹೆಚ್ಚಿನ ಶೋಧ ನಡೆಸುತ್ತಿದ್ದಾರೆ. ಜೊತೆಗೆ ಪತ್ರಿಕಾ ಕಚೇರಿಯು ಹೊಂದಿರುವ ಇತರ ಲಿಂಕ್‌ಗಳ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ.
ʻಕಾಶ್ಮೀರ್ ಟೈಮ್ಸ್ʼ ಜಮ್ಮು ಮತ್ತು ಕಾಶ್ಮೀರದ ಅತ್ಯಂತ ಹಳೆಯ ಮತ್ತು ಪ್ರಮುಖ ಪತ್ರಿಕೆಗಳಲ್ಲಿ ಒಂದಾಗಿದೆ. ವೇದ್ ಭಾಸಿನ್ ಈ ಪತ್ರಿಕೆಯನ್ನ ಸ್ಥಾಪಿಸಿದರು. 1954ರಲ್ಲಿ ವಾರಪತ್ರಿಕೆಯಾಗಿ ಪ್ರಕಟಿಸಲಾಯಿತು, ನಂತರ 1964ರಲ್ಲಿ ದಿನಪತ್ರಿಕೆಯಾಗಿ ಪರಿವರ್ತನೆಗೊಂಡಿತು.
ಇದನ್ನೂ ಓದಿ : ಬೀದರ್‌ನಲ್ಲಿ ಸಿನಿಮೀಯ ಶೈಲಿಯಲ್ಲಿ ದರೋಡೆ | 23 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ದೋಚಿ ಖದೀಮರು ಎಸ್ಕೇಪ್



















