ಬೆಂಗಳೂರು : ಬೆಂಗಳೂರು-ಬೆಳಗಾವಿ ನಡುವೆ ವಂದೇ ಭಾರತ್ ರೈಲು ಮತ್ತು ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸಿದ್ದರು. ಪ್ರಧಾನಿ ಅವರಿಗೆ ರಕ್ಷಣೆ ನೀಡುವ ಬದಲು ಪೊಲೀಸರು ನಿರ್ಲಕ್ಷ್ಯ ವಹಿಸಿರುವುದು ಬೆಳಕಿಗೆ ಬಂದಿದೆ.
ಕರ್ತವ್ಯದಲ್ಲಿದ್ದಾಗಲೇ ರಸ್ತೆಯಲ್ಲಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್‌ಗೆ ಕೇಕ್ ಕಟ್ ಮಾಡುವುದರ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಬಂದೋಬಸ್ತ್ ನೀಡವುದನ್ನು ಬಿಟ್ಟು ಕೇಕ್ ಕಟ್ಟಿಂಗ್ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವೈಟ್ ಫೀಲ್ಡ್ ಸಬ್ ಡಿವಿಷನ್ ಎಸಿಪಿ ರೀನಾ ಸುವರ್ಣರಿಂದ ಕೇಕ್ ಕಟಿಂಗ್ ಆಯೋಜನೆ ಮಾಡಿರುವ ಆರೋಪ ಕೇಳಿ ಬಂದಿದೆ. ಅಲ್ಲದೇ ಎಸಿಪಿ ಕಿಶೋರ್ ಭರಣಿ ಸಹ ಕೇಕ್ ಕಟಿಂಗ್ ನಲ್ಲಿ ಭಾಗಿಯಾಗಿದ್ದರು ಎನ್ನಲಾಗುತ್ತಿದೆ. ಎಚ್.ಎ.ಎಲ್ ಏರ್ಪೋರ್ಟ್ ನ ಮೋದಿ ಸಂಚರಿಸುವ ರಸ್ತೆಯಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.