ಕಾರ್ಮಿಕ ಸಂಘಟನೆಗಳು ಇಂದು ಕರೆ ನೀಡಿದ ಭಾರತ್ ಬಂದ್ ವೇಳೆ ಪ್ರತಿಭಟನಾ ನಿರತ ಸಿಪಿಐಎಂ ಕಾರ್ಯಕರ್ತರಿಗೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಕೇರಳದ ಕುಂಬಳೆಯ ಸಿತಂಗೋಳಿ ಎಂಬಲ್ಲಿ ಈ ಘಟನೆ ನಡೆದಿದ್ದು, ರಸ್ತೆ ತಡೆಗೆ ಮುಂದಾಗಿದ್ದ ಸ್ಥಳೀಯ ಸಿಪಿಐಎಂ ಮುಖಂಡರಾದ ಸಂತೋಷ್ ಮತ್ತು ವಿನೀಶ್ ಗೆ ಪೊಲೀಸರು ಲಾಠಿ ಏಟು ನೀಡಿದ್ದರು. ಪೊಲೀಸರ ಕ್ರಮಕ್ಕೆ ಸಿಪಿಐಎಂ ಕಾರ್ಯಕರ್ತರು ಆಕ್ರೋಶ ಹಾಕಿದ್ದಾರೆ.