ಬೆಂಗಳೂರು | ಸ್ಯಾಂಡಲ್‌ವುಡ್‌ನ ಬಾದ್‌ಷಾ ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಸಿನಿಮಾ ಇದೇ ಡಿ.25ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಮಾರ್ಕ್ ಸಿನಿಮಾ ರಿಲೀಸ್ ಬೆನ್ನಲೇ ಚಿತ್ರತಂಡಕ್ಕೆ ಪೈರಸಿ ಮಹಾಮಾರಿ ಕಂಟಕವಾಗಿ ಪರಿಣಮಿಸುತ್ತಿದೆ.
ಇದೀಗ ಈ ಬಗ್ಗೆ ಕಿಚ್ಚ ಸುದೀಪ್ ಅವರು ಪ್ರತಿಕ್ರಿಯೆ ನೀಡಿದ್ದು, ಸಿನಿಮಾ ತೆರೆಕಂಡು ಎರಡೇ ದಿನಕ್ಕೆ ಬರೋಬ್ಬರಿ 9 ಸಾವಿರಕ್ಕೂ ಹೆಚ್ಚು ಲಿಂಕ್‌ಗಳನ್ನ ತೆಗೆಸಿದ್ದೇನೆ ಎಂದು ಹೇಳಿದ್ದಾರೆ.
ಕಳೆದ ಬಾರಿ ಮ್ಯಾಕ್ಸ್ ಸಿನಿಮಾಗೂ ಇದೇ ಪರಿಸ್ಥಿತಿ ಎದುರಾಗಿತ್ತು. ಕೆಲವರನ್ನು ಪೊಲೀಸರು ಹಿಡಿದಿದ್ದರು. ಆಗ ಸುಮ್ಮನೆ ಬಿಟ್ಟು ಕಳುಹಿಸಿದ್ದೆವು. ಈ ಬಾರಿ ಮುಲಾಜೇ ಇಲ್ಲ, ಸಿಕ್ಕರೇ ಕಠಿಣ ಕ್ರಮ ಜರುಗಿಸ್ತೀವಿ ಎಂದು ಕಿಚ್ಚ ಸುದೀಪ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಮುಂದುವರೆದು ಮಾತನಾಡಿದ ಅವರು, 45 ಸಿನಿಮಾ ನಿರ್ಮಾಪಕರ ಮಾತು ಕೇಳಿ ಬೇಜಾರಾಯ್ತು, ಶಿವಣ್ಣ ಆರೋಗ್ಯ ಸರಿ ಇಲ್ಲದಾಗಲೂ ಬಂದು ಸಿನಿಮಾ ಮಾಡಿದ್ದಾರೆ. ಮೂರು ವರ್ಷ ಶ್ರಮ ಹಾಕಿ ಮಾಡಿದ ಸಿನಿಮಾಗೆ ಹೀಗಾದ್ರೆ ಬೇಜಾರಾಗುತ್ತೆ ಎಂದು ಸುದೀಪ್ ಹೇಳಿದ್ದಾರೆ.
ಇನ್ನು, ಟೀಕೆಗಳಿಗೆಲ್ಲ ಉತ್ತರ ಕೊಡೋಕೆ ಬಂದಿಲ್ಲ ಎಂದಿರುವ ಸುದೀಪ್, ಇಂಟಲಿಜೆನ್ಸ್ ಅಂದ ತಕ್ಷಣ ಸಿಲ್ಲಿ ಆಗಿ ಮಾತಾಡೋಣ ಅಲ್ಲ. ನಮ್ದು ಒಂದು ಇಂಟಲಿಜೆನ್ಸ್ ಇರುತ್ತೆ, ಸಿನಿಮಾ ಕಾಪಾಡಿಕೊಳ್ಳಿ ಅಂತ ಮಾಹಿತಿ ಬಂದಾಗ ನಾನು 48ಗಂಟೆಯ ಮುಂಚೆನೇ ಪೈರಸಿ ಬಗ್ಗೆ ವಾರ್ನ್ ಮಾಡಿದ್ದೆ. ಆದ್ರೆ ಆ ಮಾತು ಎಲ್ಲೆಲ್ಲೋ ಹೋಗಿತ್ತು ಎಂದಿದ್ದಾರೆ ಸುದೀಪ್.
ಇದನ್ನೂ ಓದಿ : ಅಗ್ಗಿಸ್ಟಿಕೆ ಹೊಗೆಯಿಂದ ಉಸಿರುಗಟ್ಟಿ ಒಂದೇ ಕುಟುಂಬದ ನಾಲ್ವರು ಸಾವು!



















