ಬೆಂಗಳೂರು: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್ಒ) 2024-25ನೇ ಸಾಲಿನಲ್ಲಿ ಇದುವರೆಗೆ ಶೇ.97ರಷ್ಟು ಪಿಎಫ್ ಸದಸ್ಯರಿಗೆ ಶೇ.8.25ರಷ್ಟು ಬಡ್ಡಿಯ ಮೊತ್ತವನ್ನು ವಿತರಿಸಿದೆ. ಜೂನ್ ನಿಂದಲೇ ಪಿಎಫ್ ಬಡ್ಡಿ ಮೊತ್ತವು ಜಮೆಯಾಗುತ್ತಿದ್ದು, ಆಗಸ್ಟ್ ವರೆಗೆ ಗಡುವು ನೀಡಲಾಗಿದೆ. ಆದರೆ, ಜುಲೈನಲ್ಲಿಯೇ ಶೇ.97ರಷ್ಟು ಸದಸ್ಯರಿಗೆ ಬಡ್ಡಿಯ ಮೊತ್ತವನ್ನು ಜಮೆ ಮಾಡಲಾಗಿದೆ. ಕೋಟ್ಯಂತರ ಸದಸ್ಯರಿಗೆ ಈಗ ಬಡ್ಡಿ ಜಮೆಯಾದಂತಾಗಿದೆ.
ಕಳೆದ ವರ್ಷ ಬಡ್ಡಿದರ ಜಮಾ ಪ್ರಕ್ರಿಯೆ ಆಗಸ್ಟ್ ನಲ್ಲಿ ಆರಂಭವಾಗಿ ಡಿಸೆಂಬರ್ ನಲ್ಲಿ ಪೂರ್ಣಗೊಂಡುತ್ತಯ. ಈ ಹಿನ್ನೆಲೆಯಲ್ಲಿ ಈ ವರ್ಷದ ತ್ವರಿತ ಕಾರ್ಯಾಚರಣೆ ಸರ್ಕಾರದ ದಕ್ಷತೆಯ ಪ್ರತಿಬಿಂಬವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇಪಿಎಫ್ಒಗೆ ಸೇರುವವರ ಸಂಖ್ಯೆಯೂ ದಿನೇದಿನೆ ಜಾಸ್ತಿಯಾಗುತ್ತಿದೆ. ಕಳೆದ ಏಪ್ರಿಲ್ ನಲ್ಲಿ 19.14 ಲಕ್ಷ ನಿವ್ವಳ ಹೊಸ ಸದಸ್ಯರು ಸೇರ್ಪಡೆಯಾಗಿದ್ದರು.
ಇಪಿಎಫ್ಒಗೆ 8 ಕೋಟಿ ಸದಸ್ಯರಿದ್ದು, ಪ್ರತಿ ವರ್ಷ ಶೇ.8.25ರಷ್ಟು ಬಡ್ಡಿ ನೀಡಲಾಗುತ್ತದೆ. ಇದರಿಂದ ಖಾಸಗಿ ಕಂಪನಿಯ ಉದ್ಯೋಗಿಗಳಿಗೆ ಉಳಿತಾಯ, ಹೂಡಿಕೆ ಹಾಗೂ ನಿವೃತ್ತಿ ಬಳಿಕ ಪಿಂಚಣಿ ಪಡೆಯಲು ಅನುಕೂಲವಾಗುತ್ತದೆ.
ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಯಿಂದ 7738299899ಗೆ EPFOHO UAN ಎಂದು ಮೆಸೇಜ್ ಕಳುಹಿಸುವ ಮೂಲಕವೂ ಪಿಎಫ್ ಬ್ಯಾಲೆನ್ಸ್ಅನ್ನು ಪರಿಶೀಲನೆ ಮಾಡಬಹುದಾಗಿದೆ. ಇದರ ಜತೆಗೆ, 011ಧಿ22901406 ಸಂಖ್ಯೆಗೆ ಮಿಸ್ ಕಾಲ್ ಕೊಟ್ಟರೂ ಬ್ಯಾಲೆನ್ಸ್ ತಿಳಿಯುತ್ತಿದ್ದರೆ. ಹಾಗೊಂದು ವೇಳೆ, ನಿಮ್ಮ ಖಾತೆಗೆ ಪಿಎಫ್ ಬಡ್ಡಿ ಜಮೆಯಾಗದಿದ್ದರೆ, ಆತಂಕಪಡುವ ಅಗತ್ಯವಿಲ್ಲ. ಹಂತ ಹಂತವಾಗಿ ಬಡ್ಡಿ ಜಮೆಯಾಗುತ್ತಿರುವ ಕಾರಣ ಕೆಲ ದಿನಗಳ ನಂತರ ಜಮೆಯಾಗುತ್ತದೆ.