ಯಾದಗಿರಿ : ಯಾದಗಿರಿ ಜಿಲ್ಲೆಯ ಹಲವೆಡೆ ರಾತ್ರಿ ಸುರಿದ ಧಾರಕಾರ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿದೆ.
ಭಾರಿ ಮಳೆಯ ಪರಿಣಾಮ ದರಿಯಾಪೂರ ಗ್ರಾಮದ ಹತ್ತಾರು ಮನೆಗಳು ಜಲಾವೃತಗೊಂಡಿವೆ. ಮಳೆಯ ನೀರು ಮೆನೆಗಳಿಗೆ ನುಗ್ಗಿ ದವಸ ಧಾನ್ಯಗಳೆಲ್ಲಾ ನೀರು ಪಾಲಾಗಿ ಅವಾಂತರ ಸೃಷ್ಠಿಯಾಗಿದೆ.
ಮತ್ತೊಂದೆಡೆ ಮನೆಯೊಂದರಲ್ಲಿ ಮೊಣಕಾಲುದ್ದ ನಿಂತಿರುವ ನೀರನ್ನು ಹೊರ ಹಾಕಲು ರಾತ್ರಿಯಿಡೀ ಹರಸಾಹಸ ಪಟ್ಟಿದ್ದಾರೆ. ಹಾಗೂ ರಾತ್ರಿ ಪೂರ್ತಿ ನೀರಿನಲ್ಲೆ ನಿಂತು ಜಾಗರಣ ಮಾಡಿರುವ ಪ್ರಸಂಗವೂ ನಡೆದಿದೆ.
