ಬೆಂಗಳೂರು: ಇಂದು ರಾಜ್ಯ ಬಂದ್ ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿವೆ. ಆದರೆ, ಬಂದ್ ಗೆ ಜನರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಬೆಳಗಿನ ಜನ- ಜೀವನ ಎಂದಿನಂತೆ ಇದೆ.
ಬೆಂಗಳೂರಿನ ಬಿಎಂಟಿಸಿ ಬಸ್ ನಿಲ್ದಾಣ ಎಂದಿನಂತೆ ಸಹಜ ಸ್ಥಿತಿಯಲ್ಲಿ ಇದೆ. ಅಲ್ಲದೇ, ಎಂದಿನಂತೆ ಮೆಜೆಸ್ಟಿಕ್ ನಿಂದ ಬಸ್ ಗಳು ಸಂಚರಿಸುತ್ತಿವೆ. ಜನರು ಕೂಡ ಪ್ರತಿ ದಿನದಂತೆ ಆಗಮಿಸುತ್ತಿದ್ದು, ಬಸ್ ಗಳು ಜನರನ್ನು ತುಂಬಿಸಿಕೊಂಡು ಸಂಚರಿಸುತ್ತಿವೆ.
ಓಲಾ, ಉಬರ್ ಆಟೋ ಗಳು ಕೂಡ ಯಥಾಸ್ಥಿತಿಯಲ್ಲಿವೆ. ಪ್ರತಿ ದಿನಕ್ಕಿಂತಲೂ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಬೆಳಗ್ಗೆಯೇ ಆಟೋ ಹಾಗೂ ಕ್ಯಾಬ್ ಗಳು ಸಂಚರಿಸುತ್ತಿವೆ, ಜನರು ಕೂಡ ದೂರದ ಊರಿಗೆ ಸಂಚರಿಸುತ್ತಿದ್ದಾರೆ. ಮಾರುಕಟ್ಟೆಗಳಲ್ಲಿ ಕೂಡ ಜನರು ತುಂಬಿ ತುಳುಕುತ್ತಿದ್ದಾರೆ.