ಹಾಸನ: ಚನ್ನಪಟ್ಟಣದಲ್ಲಿ ವಿರೋಧಿಗಳು ಏನೇ ಕುತಂತ್ರ ಮಾಡಿದರೂ ಮತದಾರರು ಮಾತ್ರ ನಿಖಿಲ್ ನನ್ನು ಅಭಿಮಾನ್ಯು ಮಾಡುವುದಿಲ್ಲ. ಅರ್ಜುನನ್ನಾಗಿ ಮಾಡುತ್ತಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧಿಗಳಿಗೆ ಜನರು ತಕ್ಕ ಉತ್ತರ ನೀಡುತ್ತಾರೆ. ಚನ್ನಪಟ್ಟಣ ಕ್ಷೇತ್ರ ದೇಶದ ಗಮನ ಸೆಳೆಯುವುದನ್ನ ಕಂಡಿದ್ದೇನೆ. ಚನ್ನಪಟ್ಟಣದಲ್ಲಿ ವಿರೋಧಿಗಳು ನೀಡುತ್ತಿರುವ ಹೇಳಿಕೆಗಳನ್ನೂ ನಾನು ಗಮನಿಸಿದ್ದೇನೆ. ನನ್ನ ಮಗನನ್ನು ರಾಜಕೀಯವಾಗಿ ಮುಳುಗಿಸಲು ಕಾಂಗ್ರೆಸ್ ಹವಣಿಸುತ್ತಿದೆ. ಆದರೆ, ಅದು ಕನಸಿನ ಮಾತು. ಅದು ಕಾಂಗ್ರೆಸ್ ಜನರಿಗೆ ಆಗದ ಮಾತು ಎಂದು ಹೇಳಿದ್ದಾರೆ.