ಬೆಂಗಳೂರು: ಈಗಷ್ಟೇ ರಾಜ್ಯ ಸರ್ಕಾರ ಹಾಲಿನ ದರ ಏರಿಕೆ ಮಾಡಿದೆ. ಇದರ ಬೆನ್ನಲ್ಲೇ ವಿದ್ಯುತ್ ದರದ ಆತಂಕ ಕಾಡುತ್ತಿತ್ತು. ಆದರೆ, ಜನರು ವಿದ್ಯುತ್ ದರ ಏರಿಕೆಯ ಶಾಕ್ ನಿಂದ ತಪ್ಪಿಸಿಕೊಂಡಿದ್ದಾರೆ.
ಪಿಂಚಣಿ ಹಾಗೂ ಗ್ರಾಚ್ಯುಟಿಗಾಗಿ KERC ವಿದ್ಯುತ್ ದರ ಏರಿಕೆ ಮಾಡಿತ್ತು. ಈ ಬೆಲೆ ಏರಿಕೆ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಆದರೆ, 36 ಪೈಸೆ ಮಾತ್ರ ಏರಿಕೆಯಾಗಲಿದೆ.
ಆದರೆ, ಈ ದರ ವಾಣಿಜ್ಯ, ಕೈಗಾರಿಕಾ, ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳಿಗೆ ಮಾತ್ರ ಅನ್ವಯವಾಗಲಿದೆ. ಆದರೆ, ಎಲ್.ಟಿ ಗೃಹ ಬಳಕೆಯ ವಿದ್ಯುತ್ ದರವನ್ನು ಇಳಿಕೆ ಮಾಡಲಾಗಿದೆ. ಗೃಹ ಬಳಕೆಗೆ ಈ ವರ್ಷ ಯುನಿಟ್ ಗೆ 10 ಪೈಸೆ, ಮುಂದಿನ ವರ್ಷ 5 ಪೈಸೆ ಕಡಿತ ಮಾಡಲಾಗಿದೆ. ಸೋಲಾರ್ ಮೇಲ್ಛಾವಣಿ ವ್ಯವಸ್ಥೆ ಹೊಂದಿರುವ ಎಲ್.ಟಿ ಗ್ರಾಹಕರಿಗೆ ದರ ಕಡಿತ ಮಾಡಲಾಗಿದೆ.