ಬೆಂಗಳೂರು: ದೇಶದ ಪ್ರಮುಖ ಡಿಜಿಟಲ್ ಪಾವತಿ ವೇದಿಕೆಗಳಲ್ಲಿ ಒಂದಾದ ಪೇಟಿಎಂ, ತನ್ನ ಬಳಕೆದಾರರ ಗೌಪ್ಯತೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿದೆ. “ಹೈಡ್ ಪೇಮೆಂಟ್” ಎಂಬ ಹೊಸ ಫೀಚರ್ ಅನ್ನು ಪರಿಚಯಿಸಿದ್ದು, ಇದರಿಂದ ಬಳಕೆದಾರರು ತಮ್ಮ ಪೇಮೆಂಟ್ ಹಿಸ್ಟ್ರಿಯಲ್ಲಿ ನಿರ್ದಿಷ್ಟ ವಹಿವಾಟುಗಳನ್ನು (ಟ್ರಾನ್ಸಾಕ್ಷನ್ಗಳನ್ನು) ತಾತ್ಕಾಲಿಕವಾಗಿ ಮರೆಮಾಡಲು ಸಾಧ್ಯವಾಗುತ್ತದೆ. ಈ ವೈಶಿಷ್ಟ್ಯವು ಸೂಕ್ಷ್ಮ ಅಥವಾ ಖಾಸಗಿ ಪಾವತಿಗಳ ಗೌಪ್ಯತೆಯನ್ನು ಕಾಪಾಡಲು ನೆರವಾಗಲಿದೆ.
ಫೀಚರ್ ಬಳಸುವ ವಿಧಾನ ಸರಳ
1. ಮೊದಲಿಗೆ ನಿಮ್ಮ ಮೊಬೈಲ್ನಲ್ಲಿ ಪೇಟಿಎಂ ಆಪ್ ತೆರೆಯಿರಿ.
2. ನಂತರ ಬ್ಯಾಲೆನ್ಸ್ & ಹಿಸ್ಟರಿ” ವಿಭಾಗಕ್ಕೆ ಭೇಟಿ ನೀಡಿ.
3. ನೀವು ಮರೆಮಾಡಲು ಬಯಸುವ ನಿರ್ದಿಷ್ಟ ವಹಿವಾಟಿನ ಮೇಲೆ ಎಡಕ್ಕೆ ಸ್ವೈಪ್ ಮಾಡಿ.
4. ಕಾಣಿಸಿಕೊಳ್ಳುವ ಹೈಡ್” ಆಯ್ಕೆಯನ್ನು ಒತ್ತಿರಿ.
5. ಕೊನೆಯದಾಗಿ, ದೃಢೀಕರಣಕ್ಕಾಗಿ ಕಾಣಿಸುವ ಹೌದು” ಪ್ರಾಂಪ್ಟ್ ಅನ್ನು ಕ್ಲಿಕ್ ಮಾಡಿ.
ಈ ಹಂತಗಳನ್ನು ಪೂರ್ಣಗೊಳಿಸಿದ ನಂತರ, ಆಯ್ದ ವಹಿವಾಟು ನಿಮ್ಮ ಪಾವತಿ ಇತಿಹಾಸದ ಪ್ರಮುಖ ನೋಟದಿಂದ ಕಣ್ಮರೆಯಾಗುತ್ತದೆ.
ಪುನಃ ವೀಕ್ಷಿಸುವುದು ಹೇಗೆ?
ಒಂದು ವೇಳೆ ನೀವು ಮರೆಮಾಡಿದ ವಹಿವಾಟುಗಳನ್ನು ಮತ್ತೆ ವೀಕ್ಷಿಸಲು ಅಥವಾ ಇತಿಹಾಸದಲ್ಲಿ ಗೋಚರಿಸುವಂತೆ ಮಾಡಲು ಬಯಸಿದರೆ, ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದು:
1. ಪೇಟಿಎಂ ಆಪ್ನಲ್ಲಿ ಬ್ಯಾಲೆನ್ಸ್ & ಹಿಸ್ಟರಿ” ವಿಭಾಗಕ್ಕೆ ಹೋಗಿ.
2. ಪೇಮೆಂಟ್ ಹಿಸ್ಟರಿ” ಪಕ್ಕದಲ್ಲಿರುವ ಮೂರು-ಡಾಟ್ ಐಕಾನ್ನ್ನು ಕ್ಲಿಕ್ ಮಾಡಿ.
3. ವ್ಯೂ ಹಿಡನ್ ಪೇಮೆಂಟ್ಸ್” ಆಯ್ಕೆಯನ್ನು ಆರಿಸಿ.
4. ನಿಮ್ಮ ಮೊಬೈಲ್ನ ಆಕ್ಸೆಸ್ ಪಿನ್ ಅಥವಾ ಬಯೋಮೆಟ್ರಿಕ್ (ಬೆರಳಚ್ಚು/ಮುಖ) ಪರಿಶೀಲನೆ ಮೂಲಕ ದೃಢೀಕರಿಸಿ.
5. ನೀವು ಗೋಚರಿಸಲು ಬಯಸುವ ವಹಿವಾಟಿನ ಮೇಲೆ ಎಡಕ್ಕೆ ಸ್ವೈಪ್ ಮಾಡಿ ಮತ್ತು ಅನ್ಹೈಡ್” ಒತ್ತಿರಿ.
ಈ ಫೀಚರ್ ವಹಿವಾಟುಗಳನ್ನು ಶಾಶ್ವತವಾಗಿ ಡಿಲೀಟ್ ಮಾಡುವುದಿಲ್ಲ. ಬದಲಿಗೆ ಅವುಗಳನ್ನು ತಾತ್ಕಾಲಿಕವಾಗಿ ನಿಮ್ಮ ಗೋಚರ ಇತಿಹಾಸದಿಂದ ತೆಗೆದುಹಾಕುತ್ತದೆ. ಅಗತ್ಯವಿದ್ದಾಗ ಅವುಗಳನ್ನು ಯಾವಾಗಲೂ ಸುಲಭವಾಗಿ ಪ್ರವೇಶಿಸಬಹುದು.
ಇತರೆ ಹೊಸ ಸೇರ್ಪಡೆಗಳು
“ಹೈಡ್ ಪೇಮೆಂಟ್” ಫೀಚರ್ ಜೊತೆಗೆ, ಪೇಟಿಎಂ ಇತ್ತೀಚೆಗೆ ಹಲವಾರು ನವೀನ ಫೀಚರ್ಗಳ್ನ ಪರಿಚಯಿಸಿದೆ. ಇವುಗಳಲ್ಲಿ ಸ್ಕ್ಯಾನ್-ಅಂಡ್-ಪೇಗಾಗಿ ಕ್ವಿಕ್ ಆಕ್ಸೆಸ್ ಕ್ಯೂಆರ್ ವಿಡ್ಜೆಟ್, ಯುಪಿಐ-ಲಿಂಕ್ಡ್ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಚೆಕ್ ಮಾಡುವ ಆಯ್ಕೆ, ಮತ್ತು ಯುಪಿಐ ಸ್ಟೇಟ್ಮೆಂಟ್ಗಳನ್ನು ಎಕ್ಸೆಲ್ ಅಥವಾ ಪಿಡಿಎಫ್ ಫಾರ್ಮ್ಯಾಟ್ನಲ್ಲಿ ಡೌನ್ಲೋಡ್ ಮಾಡುವ ಸೌಲಭ್ಯ ಸೇರಿವೆ. ಇದಲ್ಲದೆ, ಪೇಟಿಎಂ ಯುಪಿಐ ಲೈಟ್, ರೂಪೇ ಕ್ರೆಡಿಟ್ ಕಾರ್ಡ್ ಲಿಂಕಿಂಗ್, ಆಟೋಪೇ, ಮತ್ತು ಯುಎಇ, ಸಿಂಗಾಪುರ್, ಫ್ರಾನ್ಸ್, ಮಾರಿಷಸ್, ಭೂತಾನ್, ಶ್ರೀಲಂಕಾ, ಮತ್ತು ನೇಪಾಳದಂತಹ ದೇಶಗಳಲ್ಲಿ ಅಂತರರಾಷ್ಟ್ರೀಯ ಯುಪಿಐ ಪಾವತಿಗಳನ್ನು ಸಹ ಬೆಂಬಲಿಸುತ್ತದೆ.
ಪೇಟಿಎಂನ ಹೇಳಿಕೆಯೇನು?
“ನಮ್ಮ ಗ್ರಾಹಕರ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದು ಯಾವಾಗಲೂ ನಮ್ಮ ಗಮನದ ಕೇಂದ್ರವಾಗಿದೆ, ಮತ್ತು ಇದು ನಮ್ಮ ಮೊಬೈಲ್ ಪಾವತಿ ಆವಿಷ್ಕಾರಗಳನ್ನು ಮಾರ್ಗದರ್ಶನ ಮಾಡುತ್ತದೆ. ‘ಹೈಡ್ ಪೇಮೆಂಟ್’ ಮೂಲಕ, ನಾವು ಪಾವತಿದಾರರ ಗೌಪ್ಯತೆಯನ್ನು ಕಾಪಾಡುತ್ತಿದ್ದೇವೆ ಎಂದು ಪೇಟಿಎಂ ಹೇಳಿದೆ.