ಅಗ್ನಿ ಪ್ರಮಾದದಲ್ಲಿ ಸಿಲುಕಿ ಬಚಾವ್ ಆದ ಮಗನಿಗಾಗಿ ಪವನ್ ಕಲ್ಯಾಣ್ ಪತ್ನಿ ಹರಕೆ ತೀರಿಸಿದ್ದಾರೆ. ಸಿಂಗಾಪುರದಿಂದ ಹಿಂಗಿರುಗುತ್ತಿದ್ದಂತೆ ತಿರುಮಲದಲ್ಲಿ ವೆಂಕಟೇಶ್ವರನ ದರ್ಶನ ಪಡೆದ ಅನ್ನಾ ಲೆಜ್ನೆವಾ ಮುಡಿ ನೀಡಿ ಸಂಕಲ್ಪ ಪೂರೈಸಿದರು.

ಇಂದು ತಿಮ್ಮಪ್ಪನ ಭೋಜನ ಶಾಲೆಗೆ ಭೇಟಿ ನೀಡಿದ ಅನ್ನಾ, ಭಕ್ತರಿಗೆ ಪ್ರಸಾದ ಉಣಬಡಿಸಿ ಇಷ್ಟಾರ್ಥ ಸಿದ್ಧಿಸಿದ್ದಕ್ಕೆ ಸೇವೆ ಸಲ್ಲಿಸಿ ಕೃತಾರ್ಥರಾದರು. ಇದೇ ವೇಳೆ ಖುದ್ದು ಭಕ್ತರ ಸಾಲಿನಲ್ಲಿ ಕೂತು ಪ್ರಸಾದ ಸೇವಿಸಿದ ಅವರು, ಆಡಳಿತ ಮಂಡಳಿ ಸದಸ್ಯರೊಂದಿಗೂ ಚರ್ಚಿಸಿದರು.



















