ಬೆಂಗಳೂರು : ನಮ್ಮ ಮೆಟ್ರೋ ಪ್ರಯಾಣ ದರವನ್ನು ಬಿಎಂಆರ್‌ಸಿಎಲ್ ಶೇ 5ರಷ್ಟು ಹೆಚ್ಚಿಸಿದೆ. ಬೆಲೆ ಏರಿಕೆ ಬಗ್ಗೆ ಪ್ರಯಾಣಿಕರು ಭಾರೀ ಆಕ್ರೋಶ ಹೊರಹಾಕ್ತಿದ್ದಾರೆ. ಇದೀಗ ಬೆಂಗಳೂರು ನಮ್ಮ ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ಎಂಬ ಅಪಖ್ಯಾತಿಗೆ ಒಳಗಾಗಿದೆ. ದೆಹಲಿ, ಚೆನ್ನೈ, ಮುಂಬೈ ಸೇರಿದಂತೆ ಇತರ ಪ್ರಮುಖ ನಗರಗಳ ಮೆಟ್ರೋ ವ್ಯವಸ್ಥೆಗಳಿಗೆ ಹೋಲಿಸಿದರೆ ಬೆಂಗಳೂರಿನ ನಮ್ಮ ಮೆಟ್ರೋ ಟಿಕೆಟ್ ದರ ಭಾರೀ ಹೆಚ್ಚಿದೆ.

ಬೆಲೆ ಏರಿಕೆ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ ಮೆಟ್ರೋ ಅಭಿಯಾನ ಶುರುವಾಗಿದೆ. BMRCL ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಬೆನ್ನಲ್ಲೇ ಮೆಟ್ರೋ ಬಾಯ್ಕಾಟ್ ಅಭಿಯಾನ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಮೆಟ್ರೋ ದರ ಏರಿಕೆಗೆ ಜನರು ಆಕ್ರೋಶ ಹೊರ ಹಾಕಿದ್ದಾರೆ. ಮೆಟ್ರೋ ಬಹಿಷ್ಕರಿಸಿ ಇನ್ಮುಂದೆ ಬೈಕ್‌ನಲ್ಲೇ ಹೋಗ್ತೇವೆ ಎಂದು ಪೋಸ್ಟ್ ಹರಿಬಿಡ್ತಿದ್ದಾರೆ.



ದೇಶದ ಪ್ರಮುಖ ನಗರಗಳ ಮೆಟ್ರೋ ದರಗಳು
ನಗರ ( ಮೆಟ್ರೋ ಜಾಲದ ವಿಸ್ತೀರ್ಣ )-ಕನಿಷ್ಠ ದರ- ಗರಿಷ್ಠ ದರ
1-ಬೆಂಗಳೂರು ( 96 ಕಿಮೀ )
ಕನಿಷ್ಠ ದರ -₹11 ( 0-2 ಕಿಮೀ ವರೆಗೆ )
ಗರಿಷ್ಠ ದರ- ₹95 ( 25 ಕಿಮೀ ನಂತರ )
2-ದೆಹಲಿ ( 394 ಕಿಮೀ )
ಕನಿಷ್ಠ ದರ- ₹11 ( 0-2ಕಿಮೀ )
ಗರಿಷ್ಠ ದರ- ₹64 ( 32 ಕಿಮೀ ನಂತರ )
3-ಹೈದರಾಬಾದ್ ( 69 ಕಿಮೀ )
ಕನಿಷ್ಠ ದರ- ₹10( 0-2 ಕಿಮೀ )
ಗರಿಷ್ಠ ದರ- 69 ( 24 ಕಿಮೀ ನಂತರ )
4-ಚೆನೈ ( 54 ಕಿಮೀ)
ಕನಿಷ್ಠ ದರ – ₹10 ( 0-2 ಕಿಮೀ )
ಗರಿಷ್ಠ ದರ- ₹50 ( 32 ಕಿಮೀ ನಂತರ )
5-ಮುಂಬೈ (80 ಕಿಮೀ)
ಕನಿಷ್ಠ ದರ- ₹10 ( 3 ಕಿಮೀ ವರೆಗೆ )
ಗರಿಷ್ಠ ₹80 ( 42 ಕಿಮೀ ನಂತರ )
6- ಕೊಲ್ಕತ್ತಾ ( 73 ಕಿಮೀ )
ಕನಿಷ್ಟ ₹5 ( 2 ಕಿಮೀ ವರೆಗೆ )
ಗರಿಷ್ಠ ₹24( 25-30 ಕಿಮೀ )
ಹಲವು ಮಾರ್ಗಗಳಲ್ಲಿ ಗರಿಷ್ಠ ₹50.
ಇದನ್ನೂ ಓದಿ : ಶಸ್ತ್ರಾಸ್ತ್ರಗಳಿಲ್ಲದೆ ಶೋಪಿಯಾನ್‌ಗೆ ಮರಳುವೆ ಎಂದು ಎಂದಿಗೂ ಭಾವಿಸಿರಲಿಲ್ಲ | ನಿವೃತ್ತ ಸೇನಾ ಅಧಿಕಾರಿಯ ಭಾವುಕ ಮಾತು ವೈರಲ್!



















