ಉಡುಪಿ: ಕರಾವಳಿ ನಾಡಹಬ್ಬವೆಂದೆ ಖ್ಯಾತಿ ಪಡೆದಿರುವ ಉಡುಪಿ ಪರ್ಯಾಯ ಬಹಳ ಅದ್ದೂರಿಯಾಗಿ ನೆರವೇರಿತು. ಇಪ್ಪತ್ತರ ಆಸುಪಾಸಿನಲ್ಲಿರುವ ಶಿರೂರು ಮಠದ ಶ್ರೀ ವೇದವರ್ಧನ ಶ್ರೀಪಾದರು ಸರ್ವಜ್ಞ ಪೀಠಾರೋಹಣ ಅಲಂಕರಿಸಿದ್ದಾರೆ.
ಶಿರೂರು ವೇದವರ್ಧನ ಶ್ರೀಗಳ ಚೊಚ್ಚಲ ಪರ್ಯಾಯ ಮಹೋತ್ಸವದ ಭವ್ಯ ಶೋಭಾಯಾತ್ರೆ ಭಾನುವಾರ ಬೆಳಗ್ಗೆ ವಿಜೃಂಭಣೆಯಿಂದ ನಡೆಯಿತು.
ಕಾಪು ದಂಡತೀರ್ಥದಲ್ಲಿ ಮಧ್ಯರಾತ್ರಿ ಪುಣ್ಯಸ್ನಾನ ಮುಗಿಸಿದ ಯತಿಗಳು, ಪಟ್ಟದ ದೇವರಿಗೆ ಪೂಜೆ ಸಲ್ಲಿಸಿ 2:30ಕ್ಕೆ ಸರಿಯಾಗಿ ಜೋಡುಕಟ್ಟೆಗೆ ಆಗಮಿಸಿದರು. ಬಳಿಕ ಜೋಡುಕಟ್ಟೆಯಿಂದ ವೈಭವದ ಮೆರವಣಿಗೆ ಆರಂಭಗೊಂಡು ಸುಮಾರು ಎರಡು ಕಿ.ಮೀ ಸಾಗಿ ರಥಬೀದಿಯಲ್ಲಿ ಸಂಪನ್ನಗೊಂಡಿತು.

ಬಳಿಕ ಕನಕ ಕಿಂಡಿಯ ಮೂಲಕ ಶ್ರೀ ಕೃಷ್ಣನ ದರ್ಶನ ಪಡೆದು ಆರತಿ ಬೆಳಗಿದರು. ತದನಂತರ ಪುತ್ತಿಗೆ ಮಠದ ಶ್ರೀ ಸುಗುನೆಂದ್ರ ತೀರ್ಥ ಶ್ರೀಪಾದರು ಮುಂದಿನ ಎರಡು ವರ್ಷಗಳ ಶ್ರೀ ಕೃಷ್ಣ ಪೂಜಾ ಕೈಂಕರ್ಯವನ್ನು ಹಸ್ತಾಂತರಿಸಿದರು.
ಇನ್ನು ರಾಜಾಂಗಣದಲ್ಲಿ ಅಷ್ಟಮಠದ ಯತಿಗಳು, ಮೈಸೂರು ಸಂಸದ ಯದುವೀರ್ ಒಡೆಯರ್, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಉಡುಪಿ ಜಿಲ್ಲೆಯ ಶಾಸಕರು ಹಾಗೂ ಹಲವು ಗಣ್ಯರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಪರ್ಯಾಯ ದರ್ಬಾರ್ ನಡೆಯಿತು.
ಉಡುಪಿ ಸಹಿತ ನಾಡಿನ ಮೂಲೆಮೂಲೆಯ ಭಕ್ತರು ಪರ್ಯಾಯದ ಅದ್ಧೂರಿತನ ಮತ್ತು ವೈಭವಕ್ಕೆ ಸಾಕ್ಷಿಯಾದರು.
ಇದನ್ನೂ ಓದಿ: ಲಕ್ಕುಂಡಿ | ಕೋಟೆ ಗೋಡೆಯಲ್ಲಿ ಪುರಾತನ ಕಾಲದ ಶಿವಲಿಂಗ ಪತ್ತೆ



















