ನವದೆಹಲಿ: ಇಂದಿನಿಂದ ಸಂಸತ್ ಅಧಿವೇಶನ ಆರಂಭವಾಗಲಿದ್ದು, ಆಡಳಿತಾರೂಢ ಎನ್ ಡಿಎ ಗೂ ವಿಪಕ್ಷಗಳ ಕಾದಾಟ ಶುರುವಾಗುವ ಸಾಧ್ಯತೆ ಇದೆ.
ಮುಂಗಾರು ಅಧಿವೇಶನ (Budget Session) ಇಂದಿನಿಂದ ಆರಂಭವಾಗಲಿದೆ. ಇಂದಿನಿಂದ ಆ.12ರ ವರೆಗೆ ಅಧಿವೇಶನ ನಡೆಯಲಿದೆ. ಮುಂಗಾರು ಅಧಿವೇಶನದ ಮೊದಲ ದಿನವಾದ ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಸಮೀಕ್ಷಾ ವರದಿ ಮಂಡಿಸಲಿದ್ದಾರೆ. ನಾಳೆ ತಮ್ಮ ದಾಖಲೆಯ 7ನೇ ಬಜೆಟ್ ಮಂಡಿಸಲಿದ್ದಾರೆ.
19 ದಿನಗಳ ಕಾಲ ನಡೆಯಲಿರುವ ಅಧಿವೇಶನ ಆಡಳಿತ ಮತ್ತು ವಿಪಕ್ಷಗಳ ನಡುವಿನ ವಾಕ್ಸಮರಕ್ಕೆ ಕಾರಣವಾಗುವ ಸಾಧ್ಯತೆ ಇದೆ. ನೀಟ್, ನೆಟ್ ಪರೀಕ್ಷಾ ಅಕ್ರಮ, ಐಎಎಸ್ ಅಧಿಕಾರಿಗಳ ನೇಮಕಾತಿ ವಿವಾದ, ಅಗ್ನಿವೀರ್ ಯೋಜನೆ, ಮಣಿಪುರ ಹಿಂಸಾಚಾರ, ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಉಗ್ರರ ದಾಳಿ ಮೊದಲಾದ ವಿಷಯಗಳನ್ನು ಮುಂದಿಟ್ಟುಕೊಂಡು ಮೋದಿ ನೇತೃತ್ವದ ಸರ್ಕಾರ ತಿವಿಯಲು ವಿಪಕ್ಷಗಳು ಸಿದ್ಧವಾಗಿವೆ.

ಅಧಿವೇಶನದಲ್ಲಿ 5 ಮಸೂದೆ ಮಂಡನೆಗೆ ಕೇಂದ್ರ ಸರ್ಕಾರ ಸಜ್ಜಾಗಿದೆ. ಹಣಕಾಸು ಮಸೂದೆ, 2024. ವಿಪತ್ತು ನಿರ್ವಹಣೆ (ತಿದ್ದುಪಡಿ) ಮಸೂದೆ, 2024 PRS ಶಾಸನದ ಪ್ರಕಾರ, ವಿಪತ್ತು ನಿರ್ವಹಣೆಯಲ್ಲಿ ಕೆಲಸ ಮಾಡುವ ವಿವಿಧ ಸಂಸ್ಥೆಗಳ ಪಾತ್ರಗಳಲ್ಲಿ ಸ್ಪಷ್ಟತೆ ಮತ್ತು ಒಮ್ಮುಖ ತರಲು ಯತ್ನಿಸುತ್ತಿದೆ. ಭಾರತೀಯ ವಾಯುಯಾನ ವಿಧೇಯಕ- 2024 ಏರ್‌ಕ್ರಾಫ್ಟ್ ಆಕ್ಟ್, 1934 ನ್ನು ಬದಲಿಸುತ್ತದೆ.