ಬೆಂಗಳೂರು: ವಕ್ಫ್ ವಿವಾದದಲ್ಲಿ ಗೊಂದಲ ಸೃಷ್ಟಿಸಿರುವುದೇ ಬಿಜೆಪಿ ಎಂದು ಗೃಹ ಸಚಿವ ಡಾ. ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಯಾವಾಗಲೂ ಸಮಾಜದ ಸ್ವಾಸ್ತ್ಯ ಹಾಳು ಮಾಡಲು ಯತ್ನಿಸುತ್ತಿರುತ್ತದೆ. ಜನರನ್ನು ಎತ್ತಿ ಕೊಟ್ಟಿ ಕೊಮ್ಮು-ದಳ್ಳುರಿ ಸೃಷ್ಟಿಸಿ, ತನ್ನ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿರುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಗರು ಡಿವೈಡ್ ಆಂಡ್ ರೂಲ್ ಮಾಡ್ತಿದ್ದಾರೆ. ಅವರು ಇದರ ಬಗ್ಗೆ ಸರ್ಕಾರಕ್ಕೆ ತಿಳಿಸಿದ್ದಾರೆ ಓಕೆ, ಆದರೆ ಸಮಾಜದ ಸ್ವಾಸ್ಥ್ಯ ಕಳೆಯುವುದು ಸರಿಯಲ್ಲ. ಬಿಜೆಪಿಯ ಎಲ್ಲ ಆರೋಪಗಳಿಗೂ ಬೆಳಗಾವಿ ಅಧಿವೇಶನದಲ್ಲಿ ಉತ್ತರ ನೀಡುತ್ತೇವೆ.
ಸಂಸತ್ ನಲ್ಲಿ ಕೋವಿಡ್ ಹಗರಣ ಪ್ರಸ್ತಾಪ ವಿಚಾರವಾಗಿ ಇದೇ ವೇಳೆ ಮಾತನಾಡಿ, ಸಂಸದರು ಹಗರಣದಲ್ಲಿ ಭಾಗಿಯಾಗಿದ್ದಾರೆ. ಹಾಗಾಗಿ ಚರ್ಚೆ ಮಾಡಿದ್ರೆ ಉತ್ತರ ಸಿಗುತ್ತದೆ. ಅಲ್ಲೇ ಪ್ರಸ್ತಾಪ ಮಾಡೋದಕ್ಕೆ ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರ ಕೂಡ ಕೋವಿಡ್ ವೇಳೆ ಹಣ ಕೊಟ್ಟಿತ್ತು. ಹೀಗಾಗಿ ಅಲ್ಲೇ ಚರ್ಚೆಯಾಗಲಿ ಎಂದು ಹೇಳಿದ್ದಾರೆ.