ಕರ್ನಾಟಕ ರತ್ನ, ಪುನೀತ್ ರಾಜಕುಮಾರ್ 50ನೇ ಜನ್ಮ ದಿನೋತ್ಸವದ ಸಂಭ್ರಮ ಮನೆ ಮಾಡಿದೆ. ಕನ್ನಡಿಗರ ಹೃದಯದಲ್ಲಿ ಇಂದಿಗೂ ಮರೆಯಲಾಗದ ಮಾಣಿಕ್ಯ. ಕನ್ನಡಾಭಿಮಾನಿಗಳ ಆರಾಧ್ಯ ದೈವ, ಹೃದಯವಂತ, ನಗುಮುಖದ ಸರಳ ಕನ್ನಡಿಗ, ಕನ್ನಡಾಭಿಮಾನಿಗಳ, ಪರಮಾತ್ಮ. ‘ಬೆಟ್ಟದ ಹೂವು’ 2021ರ ಅಕ್ಟೋಬರ್ 29ರಂದು ಹಠಾತ್ ಆಗಿ ಹೃದಯಾಘಾತಕ್ಕೆ ಬಲಿಯಾಗಿದೆ. ಆದರೆ, ಇಂದಿಗೂ ಕನ್ನಡಿಗರ ಈ ಯುವರತ್ನ ಅಜರಾಮರವಾಗಿದ್ದಾರೆ.
ನಗುಮೊಗದ ಒಡೆಯನನ್ನು ಕಳೆದುಕೊಂಡಿರುವ ಮಡದಿ ಅಶ್ವಿನಿ ಪುನೀತ್ ರಾಜ್ಕುಮಾರ್, ಅಪ್ಪು ಬಗ್ಗೆ ಹೃದಯಸ್ಪರ್ಶಿ ಬರಹಗಳನ್ನು ಹಂಚಿಕೊಂಡು ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ. ‘ಎಂದೆಂದಿಗೂ ನಮ್ಮ ಹೃದಯದಲ್ಲಿ’ : ಅಪ್ಪು ಫೋಟೋವೊಂದರ ಮೇಲೆ, ಎಂದೆಂದಿಗೂ ನಮ್ಮ ಹೃದಯದಲ್ಲಿ, ಅಪ್ಪು ಅವರ 50ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ ಎಂದು ಬರೆದುಕೊಂಡಿದ್ದಾರೆ.
”1975-2025, ಅಪ್ಪು ಅವರ 50ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ. ಇಂದು ಅಪ್ಪು ಅವರು ಅನೇಕರೊಂದಿಗೆ ಹಂಚಿಕೊಂಡ ಕ್ಷಣಗಳು ಹಾಗೂ ಆನಂದವನ್ನು ನಾನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ಎಲ್ಲರೊಂದಿಗೆ ಇಟ್ಟಿದ್ದ ಒಡನಾಟ ಮತ್ತು ನೆನಪುಗಳು ಅವರು ಪ್ರತಿಯೊಬ್ಬರಿಗೂ ಎಷ್ಟು ಅರ್ಥಪೂರ್ಣರು ಎಂಬುವುದನ್ನು ತೋರಿಸುತ್ತದೆ. ಜೀವನದಲ್ಲಿ ಮತ್ತು ಪರದೆ ಮೇಲೆ ಅವರು ನಿರ್ವಹಿಸಿದ ಎಲ್ಲ ಪಾತ್ರಗಳಲ್ಲಿ ಅವರು ಬಿಟ್ಟ ಅಳಿಸಲಾಗದ ಪ್ರಭಾವ ನಮಗೆ ಎಂದೆಂದಿಗೂ ಸ್ಫೂರ್ತಿಯಾಗಿರುತ್ತದೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಕಮೆಂಟ್ ಮಾಡಿ, ಅಪ್ಪು ನೆನೆಯುತ್ತಿದ್ದಾರೆ.