ಬೆಂಗಳೂರು: ದೇಶದ ಪ್ರತಿಯೊಬ್ಬರೂ ಆಧಾರ್ ಕಾರ್ಡ್‌ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ತಿಳಿಸಿದೆ. ಹಾಗೆಯೇ, ಪ್ಯಾನ್ ಕಾರ್ಡ್ ಲಿಂಕ್ ಮಾಡಲು 2025ರ ಡಿಸೆಂಬರ್ 31ರ ಗಡುವು ನೀಡಲಾಗಿದೆ. ಹಾಗಾಗಿ, ಪ್ರತಿಯೊಬ್ಬರೂ ಆಧಾರ್ ಕಾರ್ಡಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸುವುದು ಕಡ್ಡಾಯವಾಗಿದೆ. ಇನ್ನು, ನಿಮ್ಮ ಆಧಾರ್ ಕಾರ್ಡಿಗೆ ಪ್ಯಾನ್ ಕಾರ್ಡ್ ಲಿಂಕ್ ಆಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬಹುದಾಗಿದೆ. ಅದರ ಕುರಿತ ಮಾಹಿತಿ ಇಲ್ಲಿದೆ.
ಚೆಕ್ ಮಾಡಿಕೊಳ್ಳುವುದು ಹೇಗೆ
• ಮೊದಲಿಗೆ ಆದಾಯ ತೆರಿಗೆ ಪೋರ್ಟಲ್ ಆಗಿರುವ https://eportal.incometax.gov.in/iec/foservices/#/login ಗೆ ಭೇಟಿ ನೀಡಬೇಕು.
• ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ನಂಬರ್ ನಮೂದಿಸಿ, View Link Aadhaar Status ಮೇಲೆ ಕ್ಲಿಕ್ ಮಾಡಿ
• ಆಗ ನಿಮ್ಮ ಪ್ಯಾನ್ ಲಿಂಕ್ ಆಗಿದ್ದರೆ ಆಗಿದೆ ಎಂದು, ಆಗಿರದಿದ್ದರೆ ಲಿಂಕ್ ಆಗಿಲ್ಲ ಎಂಬುದನ್ನು ತೋರಿಸುತ್ತದೆ. ಲಿಂಕ್ ಆಗಿದ್ದರೆ ಯಾವುದೇ ತೊಂದರೆ ಇಲ್ಲ. ಆಗಿರದಿದ್ದರೆ ಕೂಡಲೇ ಲಿಂಕ್ ಮಾಡಬೇಕು.
ಲಿಂಕ್ ಮಾಡದಿದ್ದರೆ ಪ್ಯಾನ್ ನಿಷ್ಕ್ರಿಯ
ಆಧಾರ್ ಕಾರ್ಡಿಗೆ ಪ್ಯಾನ್ ಕಾರ್ಡ್ ಅನ್ನು 2025ರ ಡಿಸೆಂಬರ್ ಒಳಗೆ ಲಿಂಕ್ ಮಾಡದಿದ್ದರೆ, 2026ರ ಜನವರಿ 1ರಿಂದ ಪ್ಯಾನ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ಈಗಾಗಲೇ ತೆರಿಗೆ ಮಂಡಳಿಯು ಎಚ್ಚರಿಕೆ ನೀಡಿದೆ. ಹಾಗೊಂದು ವೇಳೆ, ಪ್ಯಾನ್ ಕಾರ್ಡ್ ನಿಷ್ಕ್ರಿಯವಾದರೆ ಬಳಿಕ ದಂಡ ಕಟ್ಟಬೇಕಾಗುತ್ತದೆ. ಟಿಡಿಎಸ್ ದಂಡದ ಪ್ರಮಾಣವೂ ಇದರಿಂದ ಜಾಸ್ತಿಯಾಗುತ್ತದೆ. ಹಾಗಾಗಿ, ನಿಗದಿತ ಗಡುವಿನೊಳಗೆ ಸಾರ್ವಜನಿಕರು ಲಿಂಕ್ ಮಾಡಿಸಬೇಕಾಗಿದೆ
ಸಾರ್ವಜನಿಕರು ಆನ್ ಲೈನ್ ಮೂಲಕವೇ ಸುಲಭವಾಗಿ ಆಧಾರ್ ಕಾರ್ಡಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಬಹುದಾಗಿದೆ. https://eportal.incometax.gov.in/iec/foservices/#/login ಭೇಟಿ ನೀಡಿ, ಅಗತ್ಯ ವಿವರಗಳನ್ನು ಒದಗಿಸಿ ಲಿಂಕ್ ಮಾಡಬಹುದಾಗಿದೆ.
ಇದನ್ನೂ ಓದಿ: ಭ್ರಷ್ಟಚಾರ ಆರೋಪ | ಬೆಂಗಳೂರಿನ 6 RTO ಕಚೇರಿಗಳ ಮೇಲೆ ಲೋಕಾಯುಕ್ತ ರೇಡ್



















