ನವದೆಹಲಿ: ಭಾರತದ ದಾಳಿಗೆ ತತ್ತರಿಸಿದ್ದ ಪಾಕಿಸ್ತಾನವು ಅಮೆರಿಕದ ಕಾಲು ಬಿದ್ದು ಕದನ ವಿರಾಮ ಘೋಷಿಸಿಕೊಂಡಿತ್ತು. ಆದರೆ, ಈಗ ಮತ್ತೆ ಬಾಲ ಬಿಚ್ಚಿರುವ ಆರೋಪ ಕೇಳಿ ಬಂದಿದೆ.
ರಾಜಸ್ಥಾನದ ಬಾರ್ಮರ್ ನಲ್ಲಿ ಡ್ರೋನ್ ಚಟುವಟಿಕೆ ಕಂಡು ಬಂದಿದೆ ಎನ್ನಲಾಗುತ್ತಿದೆ. ಹೀಗಾಗಿ ನಗರದಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ. ಎರಡನೇ ದಿನವೂ ಪಾಕ್ ತನ್ನ ಕುತಂತ್ರ ಬುದ್ಧಿ ಪ್ರದರ್ಶಿಸಿದ್ದು, ಕದನ ವಿರಾಮ ಉಲ್ಲಂಘಿಸಿದೆ ಎನ್ನಲಾಗುತ್ತಿದೆ.
ಶನಿವಾರ ಸಂಜೆಯಿಂದ ಉಭಯ ದೇಶಗಳ ನಡುವೆ ಕದನ ವಿರಾಮ ಘೋಷಿಸಲಾಗಿತ್ತು. ಭಾನುವಾರ ಮತ್ತೆ ರಾಜಸ್ಥಾನದಲ್ಲಿ ಡ್ರೋನ್ ಕಾಣಿಸಿಕೊಂಡಿವೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಸಂಜೆ 7.30ರಿಂದ ಜೈಸಲ್ವೇರ್ನಲ್ಲಿ ಹಾಗೂ ರಾತ್ರಿ 8 ರಿಂದ ಬಾಡಮೇರ್ನಲ್ಲಿ ವಿದ್ಯುತ್ ದೀಪಗಳನ್ನು ಆರಿಸಿ, ಬ್ಲ್ಯಾಕ್ ಔಟ್ ಮಾಡಲಾಗಿದೆ. ಆದರೆ, ಇದು ಇನ್ನೂ ಅಧಿಕೃತವಾಗಿಲ್ಲ.