ಪಾಕಿಸ್ತಾನದ ಸಂಸತ್ತಿನಲ್ಲೂ ಪ್ರಧಾನಿ ಮೋದಿ ಹೆಸರು ಮಾರ್ಧನಿಸಿದೆ. ಪಾಕಿಸ್ತಾನ ಮೇಲಿನ ದಾಳಿ ವಿಚಾರವಾಗಿ ನಡೆದಿದ್ದ ಚರ್ಚೆಯಲ್ಲಿ ಮಾತನಾಡಿದ ಸಂಸದ, ಪಾಕ್ ಪ್ರಧಾನಿ, ಮೋದಿಯವರ ಹೆಸರನ್ನು ಹೇಳಲೂ ಭಯ ಪಡುತ್ತಿದ್ದಾರೆ.
ಭಾರತ ಪಾಕಿಸ್ತಾನದ ಮೇಲೆ ಸಮರ ಸಾರಿದೆ. ಗಡಿಯಲ್ಲಿ ನಮ್ಮ ಯೋಧರು ದಿಟ್ಟವಾಗಿ ಉತ್ತರ ನೀಡುತ್ತಿದ್ದಾರೆ. ಇಂಥಾ ಸಂದರ್ಭದಲ್ಲಿ ಓರ್ವ ನಾಯಕನಾದವನು ಅವರ ಆತ್ಮಸ್ಥೈರ್ಯ ಹೆಚ್ಚಿಸುವಂಥಾ ಕೆಲಸ ಮಾಡಬೇಕು. ಆದರೆ, ನಮ್ಮ ನಾಯಕ, ಭಾರತದ ಪ್ರಧಾನಿ ಮೋದಿ ಹೆಸರು ಹೇಳುವುದಕ್ಕೂ ಅಂಜುತ್ತಿದ್ದಾರೆ ಅಂತಾ ಟೀಕಿಸಿದ್ದಾರೆ. ಟಿಪ್ಪು ಸುಲ್ತಾನ್ ನ ಹೇಳಿಕೆ ಪ್ರಸ್ತಾಪಿಸಿರುವ ಆ ಸಂಸದ ಓರ್ವ ನಾಯಕ ಸಿಂಹದಂತಿದ್ದರೆ, ಅವನ ಸೈನ್ಯ ನರಿಗಳದ್ದಾದರೂ ಯುದ್ಧ ಗೆದ್ದು ಬರಬಹುದು. ಆದರೆ, ಓರ್ವ ನಾಯಕನೇ ನರಿಯಾಗಿ ಇಡೀ ಸೈನ್ಯ ಸಿಂಹಗಳಿಂದ ತುಂಬಿದರೂ ಯಾವುದೇ ಪ್ರಯೋಜನವಿಲ್ಲ ಅಂತಾ ಕುಟುಕಿದ್ದಾನೆ.



















