ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿಯ (Pahalgam Terror Attack) ನಂತರ ಪಾಕ್ ನಿದ್ದೆ ಮಾಡುತ್ತಿಲ್ಲ. ಭಾರತ ಕನಸಿನಲ್ಲಿ ಅಟ್ಯಾಕ್ ಮಾಡುವಂತೆ ಭಾಸವಾಗುತ್ತಿದೆ. ಭಾರತದ ದಾಳಿಯ ಬಗ್ಗೆ ಊಹಿಸಿಕೊಂಡು ಪತರಗುಟ್ಟುತ್ತಿರುವ ಪಾಕ್ ಗಡಿಯಲ್ಲಿ ಅಲಾರಾಂ ಅಳವಡಿಸಿಕೊಂಡಿದೆ.
ಅಲ್ಲಿನ ಖೈಬರ್ ಪಖ್ತುಂಖ್ವಾ (ಕೆಪಿ) ಸರ್ಕಾರವು 29 ಜಿಲ್ಲೆಗಳಲ್ಲಿ ತುರ್ತು ಎಚ್ಚರಿಕೆ ಸೈರನ್‌ಗಳನ್ನು ಅಳವಡಿಸಲು ಪ್ರಾರಂಭಿಸಿದೆ. ಯಾವುದೇ ವೈಮಾನಿಕ ಬೆದರಿಕೆಗಳ ಬಗ್ಗೆ ನಾಗರಿಕರಿಗೆ ಎಚ್ಚರಿಕೆ ನೀಡಲು ಮತ್ತು ಮಿಲಿಟರಿಯ ಮೇಲಾಗುವ ಅಪಾಯಗಳನ್ನು ತಗ್ಗಿಸಲು ಸೈರನ್‌ಗಳನ್ನು ಬಳಸಲು ಸೂಚಿಸಲಾಗಿದೆ.
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ತುರ್ತು ಎಚ್ಚರಿಕೆ ಸೈರನ್‌ಗಳನ್ನು ಪೇಶಾವರ್, ಅಬೋಟಾಬಾದ್, ಮರ್ದಾನ್, ಕೊಹತ್, ಸ್ವಾತ್, ಡೇರಾ ಇಸ್ಮಾಯಿಲ್ ಖಾನ್, ಬನ್ನು, ಮಲಕಂಡ್, ಲೋವರ್ ದಿರ್, ಲೋವರ್ ಚಿತ್ರಾಲ್, ಕುರ್ರಂ, ಚಾರ್ಸದ್ದಾ, ನೌಶೇರಾ, ಸ್ವಾಬಿ, ಬಜೌರ್, ಹರಿಪುರ್, ಮನ್ಸೆಹ್ರಾ, ಹಂಗು, ಮೊಹಮ್ಮದ್, ಅಪ್ಪರ್ ದಿರ್, ಶಾಂಗ್ಲಾ, ಬುನೇರ್, ಲಕ್ಕಿ ಮಾರ್ವಾತ್, ಖೈಬರ್, ಉತ್ತರ ವಜೀರಿಸ್ತಾನ್, ದಕ್ಷಿಣ ವಜೀರಿಸ್ತಾನ್, ಬಟ್ಟಗ್ರಾಮ್, ಟ್ಯಾಂಕ್ ಮತ್ತು ಒರಾಕ್ಜೈ ಸೇರಿದಂತೆ 29 ಜಿಲ್ಲೆಗಳಲ್ಲಿ ಸೈರಾನ್ ಅಳವಡಿಸಿಕೊಳ್ಳಲಾಗುತ್ತಿದೆ.



















