ನವದೆಹಲಿ: ಎಲ್ ಒಸಿಯಲ್ಲಿ ಪಾಕ್ ಸೇನೆಯಿಂದ ಅಪ್ರಚೋದಿತ ಗುಂಡಿನ ದಾಳಿ ನಡೆದಿದ್ದು, ಭಾರತೀಯ ಸೇನೆ ಕೂಡ ಉತ್ತರ ಕೊಟ್ಟಿದೆ. ಈ ವೇಳೆ ಪಾಕ್ ಸೇನಾ ಶಿಬಿರಗಳನ್ನು ಭಾರತೀಯ ಸೇನೆ ಧ್ವಂಸ ಮಾಡಿದೆ.
ಪ್ವಾರ, ಉರಿ, ಅಖ್ನೂರು ಪ್ರದೇಶದಲ್ಲಿ ಫೈರಿಂಗ್ ನಡೆಸಿದ್ದ ಪಾಕ್ ಸೇನೆಯ ದಾಳಿಗೆ ಪ್ರತಿದಾಳಿ ನಡೆಸಿ ಬಿಎಸ್ಎಫ್ ತಿರುಗೇಟು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ ನಂತರ, ಪಾಕಿಸ್ತಾನವು ಭಯಭೀತವಾಗಿದೆ.
ಪಾಕಿಸ್ತಾನ ಸೇನೆಯ ಆದೇಶದ ಮೇರೆಗೆ ತೀವ್ರ ಆತಂಕಗೊಂಡ ಅಮೆರಿಕದಲ್ಲಿರುವ ಪಾಕಿಸ್ತಾನದ ರಾಯಭಾರಿ ರಿಜ್ವಾನ್ ಸಯೀದ್ ಶೇಖ್, ಭಾರತದೊಂದಿಗೆ ಉದ್ವಿಗ್ನತೆಯನ್ನು ಕಡಿಮೆ ಮಾಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.



















